ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ದಲಿತರು, ಮುಸ್ಲಿಮರಿಗೆ ಸ್ಥಾನವಿಲ್ಲ: ಆರೋಪ

Update: 2019-01-05 17:16 GMT

ಮೂಡಿಗೆರೆ, ಜ.5: ಪಟ್ಟಣದಲ್ಲಿ ಇದೇ ತಿಂಗಳು 2 ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಆದರೆ ಈ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ದಲಿತರು ಹಾಗೂ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕಕ್ಷಣಾ ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ರಾಮಯ್ಯ ದೂರಿದ್ದಾರೆ.

ಶನಿವಾರ ಈ ಕುರಿತು ಹೇಳಿಕೆಯಲ್ಲಿ ತಿಳಿಸಿ, ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರವಾಗಿದ್ದು, ತಾಲೂಕಿನಲ್ಲಿ ದಲಿತರು ಬಹುಸಂಖ್ಯಾರಾಗಿದ್ದಾರೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಭಯ ಸಮುದಾಯಗಳ ಜತೆಗೆ ಎಲ್ಲಾ ರಂಗದಲ್ಲೂ ಉತ್ತಮ ಒಡನಾಟ, ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ತಾಲೂಕಿನಲ್ಲಿ ಇದೂವರೆಗೂ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ಈ ಎರಡೂ ಸಮುದಾಯವನ್ನು ಕಡೆಗಣಿಸಲಾಗುತ್ತಲೇ ಬರಲಾಗಿದೆ. ಈ ಕಾರಣದಿಂದ ಹಿಂದೊಮ್ಮೆ ಪರ್ಯಾಯ ಜನಪರ ಸಮ್ಮೇಳನ ನಡೆಸಲಾಗಿತ್ತು. ಈ ಬಾರಿಯೂ ದಲಿತರು ಮತ್ತು ಮುಸ್ಲಿಮರನ್ನು ಕಡೆಗಣಿಸಿದ್ದರಿಂದ ಪರ್ಯಾಯ ಸಮ್ಮೇಳನ ಆಯೋಜಿಸಲು ಸಮಾನ ಮನಸ್ಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಲೂಕಿನಲ್ಲಿ ಪ್ರಬಲ ಕೋಮಿನ ಜನರನ್ನು ಮೆಚ್ಚಿಸಿಕೊಳ್ಳುವ ಬರದಲ್ಲಿ ದಲಿತರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಕಾರಿಗಳು ಈ ಧೊರಣೆಯಿಂದ ಹಿಂದೆ ಸರಿದು ದಲಿತರು ಮತ್ತು ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದೇ ರೀತಿ ಮುಂದುವರೆದರೆ ನಾವು ಕನ್ನಡ ಸಾಹಿತ್ಯ ಸಮ್ಮೇಳನದಿಂದ ದೂರವಿದ್ದು, ಬಹಿಷ್ಕಾರ ಹಾಕಿ ಪರ್ಯಾಯ ಜನಪರ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News