ಜೂಜಾಟ ಕ್ಲಬ್ ಮೇಲೆ ಸಿಸಿಬಿ ದಾಳಿ: 15 ಜನರ ಬಂಧನ

Update: 2019-01-06 13:01 GMT

ಬೆಂಗಳೂರು, ಜ.6: ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ ಇಲ್ಲಿನ ಕೆ.ಸಿ.ಪ್ಯಾಲೇಸ್ ಕ್ಲಬ್‌ನ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 15 ಜನರನ್ನು ಬಂಧಿಸಿ, 2.24 ಲಕ್ಷ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಗರ ಜಯಮಹಲ್ ಮುಖ್ಯ ರಸ್ತೆಯ ಕೆ.ಸಿ.ಪ್ಯಾಲೇಸ್ ಕ್ಲಬ್‌ನಲ್ಲಿ ಕೆಲವು ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿ ಸಂಗ್ರಹಿಸಿ ಸಿಸಿಬಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಒಟ್ಟು 15 ಜನರನ್ನು ಬಂಧಿಸಲಾಗಿದ್ದು, 2.24 ಲಕ್ಷ ನಗದು, ಇಸ್ಪೀಟ್ ಕಾರ್ಡ್ ಜಪ್ತಿ ಮಾಡಲಾಗಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News