×
Ad

ಮಂಗನಖಾಯಿಲೆ: ಮೃತ ಮಂಗಗಳ ಅವಶೇಷ ತೋರಿಸಿದರೆ ಬಹುಮಾನ

Update: 2019-01-07 23:01 IST

ಶಿವಮೊಗ್ಗ, ಜ.7: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕ್ಯಾಸನೂರ್ ಅರಣ್ಯ ಖಾಯಿಲೆ (ಕೆಎಫ್‍ಡಿ-ಮಂಗನಖಾಯಿಲೆ) ಹೆಚ್ಚಾಗಿದ್ದು, ಈವರೆಗೆ 6 ಜನರ ಬಲಿ ತೆಗೆದುಕೊಂಡು, ಸುಮಾರು 40 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. 

ಆದ್ದರಿಂದ ಊರು/ಅರಣ್ಯಗಳಲ್ಲಿ ಮೃತಪಟ್ಟಿರುವ ಮಂಗಗಳ ಅವಶೇಷಗಳನ್ನು ಗ್ರಾಮ ಪಂಚಾಯತ್ ಸಹಾಯವಾಣಿಗೆ ಅಥವಾ ಆಯಾ ವ್ಯಾಪ್ತಿಯ ವೈದ್ಯಾಧಿಕಾರಿಗಳಿಗೆ ಅಥವಾ ಆಯಾ ವ್ಯಾಪ್ತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸುವ ಸಾರ್ವಜನಿಕರಿಗೆ ರೂ. 500ಗಳ ಬಹುಮಾನವನ್ನು ನೀಡಲು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಶಿವರಾಮೇಗೌಡ ಆದೇಶಿಸಿದ್ದಾರೆ.

ಈ ಮೊತ್ತವನ್ನು ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಮಂಗಗಳ ಮೃತ ದೇಹಗಳ ಮರಣೋತ್ತರ ಪರೀಕ್ಷೆಗೊಳಪಡಿಸಿ ದೃಢೀಕರಣ ಪತ್ರವನ್ನು ನೀಡಿದ ನಂತರವೇ ಪಾವತಿಸಲಾಗುವುದು ಎಂದು ಸೂಚಿಸಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News