ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ಶವವಾಗಿ ಪತ್ತೆ
Update: 2019-01-10 19:10 IST
ತುಮಕೂರು,ಜ.10: ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ಹಳೆ ಹೆಚ್.ಎಂ.ಟಿ ಹಿಂದಿನ ಇಸ್ರೋ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ತುಮಕೂರು ವಿವಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಈಶ್ವರ್(57) ಮೃತ ವ್ಯಕ್ತಿ.
ತುಮಕೂರಿನ ಹಳೆ ಹೆಚ್.ಎಂ.ಟಿ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪ್ರಾಧ್ಯಾಪಕ ಈಶ್ವರ್ ಅವರ ಶವ ಪತ್ತೆಯಾಗಿದ್ದು, ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಡಿಸೆಂಬರ್ 9 ರಂದು ವಾಯುವಿಹಾರಕ್ಕೆ ತೆರಳಿದ್ದ ಈಶ್ವರ್ ಬಳಿಕ ನಾಪತ್ತೆಯಾಗಿದ್ದರು. ನಾಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿತ್ತು. ಅಲ್ಲದೇ, ವಿವಿ ವಿಜ್ಞಾನ ವಿಭಾಗ ಸಹೋದ್ಯೋಗಿಗಳ ವಿರುದ್ಧ ಈಶ್ವರ್ ಪೋಷಕರು ಕಿರುಕುಳ ಆರೋಪ ಮಾಡಿದ್ದರು. ಹೊಸ ಬಡಾವಣೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.