ರಾಜ್ಯ ಮಹಿಳಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಶೆರಿಲ್ ಲೋನಾ ಆಯ್ಕೆ
ಹೊಸದಿಲ್ಲಿ, ಜ. 10: ಕರ್ನಾಟಕ ಮಹಿಳಾ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಸೆಲ್‌ಗೆ ಸಮನ್ವಯಗಾರ್ತಿಯಾಗಿ ಶೆರಿಲ್ ಲೋನಾ ಅವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ (ಎಐಎಂಸಿ) ಗುರುವಾರ ನೇಮಕ ಮಾಡಿದೆ.
ಎಂಜಿನಿಯರ್ ಆಗಿರುವ ಶೆರಿಲ್ ಮಂಗಳೂರಿನವರು. ಅವರು 6 ವರ್ಷ ಆಡಳಿತ ಪ್ರಬಂಧಕರ ಹುದ್ದೆ ಸಹಿತ ಯುಎಇಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಅನಂತರ ಮಂಗಳೂರಿಗೆ ಆಗಮಿಸಿ ಡಿಜಿಟಲ್ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್‌ನಲ್ಲಿ ಎಂಟೆಕ್ ಪದವಿ ಪಡೆದರು. ಬಳಿಕ ಮಂಗಳೂರಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಸಹಾಯಕ ಪ್ರಾದ್ಯಾಪಕ ರಾಗಿ ಕಾರ್ಯ ನಿರ್ವಹಿಸಿದ್ದರು.
ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸೋಷಿಯಲ್ ಮೀಡಿಯಾದ ಉಸ್ತುವಾರಿ) ಚಿತ್ರಾ ಸರವರ ಹೊಸದಿಲ್ಲಿಯಲ್ಲಿ ಈ ನೇಮಕಾತಿಯನ್ನು ಪ್ರಕಟಿಸಿದ್ದಾರೆ. ಎಐಎಂಸಿ ರಾಜಸ್ಥಾನ, ಕರ್ನಾಟಕ, ಉತ್ತರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಐವರು ಸಾಮಾಜಿಕ ಜಾಲ ತಾಣದ ಸಮನ್ವಯಕಾರರನ್ನು ನಿಯೋಜಿಸಿದೆ.
ಸೋಶಿಯಲ್ ಮೀಡಿಯಾ ಸೆಲ್‌ಗೆ ಸಮನ್ವಯಗಾರ್ತಿಯಾಗಿ ಆಯ್ಕೆಯಾಗಿರುವ ಶೆರಿಲ್‌ಗೆ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.