ಸರಕಾರಿ ಒತ್ತುವರಿ ಜಾಗ ತೆರವುಗೊಳಿಸಿದ ಮೈಸೂರು ಜಿಲ್ಲಾಡಳಿತ

Update: 2019-01-10 17:59 GMT

ಮೈಸೂರು,ಜ.10: ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಮತ್ತೆ ಜೆಸಿಬಿ ಘರ್ಜನೆ ನಡೆಸಿದೆ. ಸರ್ಕಾರಿ ಒತ್ತುವರಿ ಜಾಗ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ನಗರದ ಎಂಜಿ ರಸ್ತೆಯ ಮಾಲ್ ಆಫ್ ಮೈಸೂರು ಎದುರಿನ ದೊಡ್ಡಕರೆ ಮೈದಾನದಲ್ಲಿ ಕಾರ್ಯಾಚರಣೆ ನಡೆದಿದೆ.

ತಹಶೀಲ್ದಾರ್ ರಮೇಶ್‍ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು 100 ಪೊಲೀಸರ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯ ನಡೆದಿದೆ. ಕಾರ್ಯಾಚರಣೆಗೆ ದೊಡ್ಡಕೆರೆ ಟ್ಯಾಂಕ್ ಬಂಡ್ ಸೈಟ್ ಮಾಲಕ ಸಂಘದವರು ಅಡ್ಡಿಯುಂಟು ಮಾಡಿದ್ದು, ತಹಶೀಲ್ದಾರ್ ಹಾಗೂ ಸಂಘದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನಮ್ಮ ಬಳಿ ಎಲ್ಲಾ ದಾಖಲಾತಿಗಳು ಇವೆ. ನಾವು ಪ್ರತಿವರ್ಷ ಕಂದಾಯ ಕಟ್ಟುತ್ತಿದ್ದೇವೆ. ಹೈಕೋರ್ಟ್ ನಿಂದ ನಮಗೆ ಆದೇಶ ಬಂದಿದೆ. ಎಂಜಿ ರಸ್ತೆ ವಿಸ್ತರಣೆ ಮಾಡುವಾಗ ನಮ್ಮ ಜಾಗ ಬಿಟ್ಟು ಕೊಟ್ಟಿದ್ದೇವೆ. ಇದರ ಬದಲಿಗೆ ನಮಗೆ ಬೇರೆ ಕಡೆ ಜಾಗವನ್ನು ಗುರುತು ಮಾಡಿದ್ದಾರೆ. ಈಗ ಇವರು ಬಂದು ತೆರವು ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಕಾನೂನು ಹೋರಾಟ ಮಾಡುತ್ತೇವೆ ಎಂದು ಸಂಘದ ಸದಸ್ಯ ಅಚ್ಚುತ್ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News