ಒತ್ತುವರಿ ತೆರವು ಸಂದರ್ಭ ಒತ್ತಡಗಳಿಗೆ ಮಣಿಯಬೇಡಿ: ಎಸಿಸಿಎಫ್ ಅಣ್ಣಯ್ಯ
ಚಿಕ್ಕಮಗಳೂರು, ಜ.11: ಅರಣ್ಯ ಭೂಮಿ ಒತ್ತುವರಿ ತೆರವು ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿ ಯಾವುದೇ ಒತ್ತಡಗಳಿಗೆ ಮಣಿಯದೆ ಕಾನೂನು ರೀತಿ ಕ್ರಮಕ್ಕೆ ಮುಂದಾಗಬೇಕೆಂದು ಎಂದು ನಿವೃತ್ತ ಎಸಿಸಿಎಫ್ ಎ.ಎಂ.ಅಣ್ಣಯ್ಯ ತಿಳಿಸಿದರು.
ನಗರದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಡೆದ ಕರ್ನಾಟಕ ಅರಣ್ಯ ಕಾಯ್ದೆ 1963- 64ಎ ಕುರಿತ ನಡಾವಳಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ, ಕಂದಾಯ, ಪೊಲೀಸ್, ಸರ್ವೇ ಇಲಾಖೆ ಎಲ್ಲರ ಜೊತೆ ಅನ್ಯೋನ್ಯ ಸಂಪರ್ಕ ಇಟ್ಟುಕೊಂಡು ಅರಣ್ಯ ಭೂಮಿ ಒತ್ತುವರಿ ತಡೆಯಲು ಹಾಗೂ ಕಾನೂನು ಪ್ರಕಾರ ಕ್ರಮಕ್ಕೆ ಸೂಕ್ತ ವಿಚಾರಣೆ ಮಾಡಲು ಸರ್ಕಾರಿ ವಕೀಲರಿಗೆ ಸಹಕಾರಿ ಆಗುವ ರೀತಿ ಕೆಲಸ ಮಾಡುವುದು ಮುಖ್ಯವಾಗಬೇಕು.
ನಮ್ಮ ಕಾನೂನನ್ನು ಅವಲೋಕಿಸಿದರೆ ಮೊದಲ ಉಲ್ಲೇಖವಿರುವುದು "ಯಾವುದೇ ವ್ಯಕ್ತಿಯಾದರೂ" ಎನ್ನುವ ಪದ. ಮೊದಲು ಅದನ್ನು ಅಧಿಕಾರಿಗಳು ಗುರುತು ಮಾಡಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು, ಭೂಮಿಯೊಂದೇ ಜೀವಂತ ಗ್ರಹ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬದುಕಲು ಬೇಕಾದ ಗಾಳಿ ನೀರು ಮಣ್ಣು ಎಲ್ಲವೂ ಇಲ್ಲಿದೆ. ಇದನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ ಎಂದು ಕಾನೂನಿನಲ್ಲಿ ಹೇಳಿದೆ. ಅದರ ಸುಯೋಗ ಅರಣ್ಯ ಇಲಾಖೆಗೆ ಹೆಚ್ಚು ಒದಗಿಬಂದಿದೆ ಎಂದರು.
ಅರಣ್ಯ, ಕಂದಾಯ, ಪೊಲೀಸ್, ಸರ್ವೇ ಇಲಾಖೆ ಎಲ್ಲರ ಜೊತೆ ಅನ್ಯೋನ್ಯ ಸಂಪರ್ಕ ಇಟ್ಟುಕೊಂಡು ಅರಣ್ಯ ಭೂಮಿ ಒತ್ತುವರಿ ತಡೆಯಲು ಹಾಗೂ ಕಾನೂನು ಪ್ರಕಾರ ಕ್ರಮಕ್ಕೆ ಸೂಕ್ತ ವಿಚಾರಣೆ ಮಾಡಲು ಸರಕಾರಿ ವಕೀಲರಿಗೆ ಸಹಕಾರ ಆಗುವ ರೀತಿ ಕೆಲಸ ಮಾಡುವುದು ಮುಖ್ಯವಾಗಬೇಕು ಎಂದ ಅವರು, ಅರಣ್ಯ ನಿಯಮವೇ ನಮ್ಮ ಕೈಪಿಡಿ. ಅದು ಸರಕಾರದ ಆದೇಶ. ಬಹಳಷ್ಟು ಸಂದರ್ಭಗಳಲ್ಲಿ ಅದನ್ನು ಜಾರಿಗೆ ತರದೇ ಅಲ್ಲೊಂದು ಇಲ್ಲೊಂದಷ್ಟು ಪ್ರಯತ್ನಗಳನ್ನು ಮಾತ್ರ ಮಾಡಿದ್ದೆವೆ. ಅದು ಸರಿಯಲ್ಲ. ಕ್ರಮಕೈಗೊಳ್ಳಲು ಸಾಧ್ಯತೆ ಇರುವ ಕಡೆಯೂ ಕನೂನನ್ನು ಗಾಳಿಗೆ ತೂರಲು ಸಾಧ್ಯವಿಲ್ಲ ಎಂದರು.
ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಭೂಮಿಯೊಂದೇ ಜೀವಂತ ಗ್ರಹ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬದುಕಲು ಬೇಕಾದ ಗಾಳಿ ನೀರು ಮಣ್ಣು ಎಲ್ಲವೂ ಇಲ್ಲಿದೆ. ಇದನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬರ ಕರ್ತವ್ಯ ಎಂದು ಕಾನೂನಿನಲ್ಲಿ ಹೇಳಿದೆ. ಅದರ ಸುಯೋಗ ಅರಣ್ಯ ಇಲಾಖೆಗೆ ಹೆಚ್ಚು ಒದಗಿಬಂದಿದೆ ಎಂದರು.
ಅರಣ್ಯ ನಿಯಮಗಳೇನು? ನಿಮ್ಮ ಕರ್ತವ್ಯಗಳೇನು ಎಲ್ಲವೂ ನಿಮಗೆ ಗೊತ್ತಿರುತ್ತದೆ ಅದರ ಪ್ರಕಾರ ಕೆಲಸ ಮಾಡಬೇಕಿದೆ. ನಮ್ಮ ಬೌಂಡರಿಯನ್ನು ಪ್ರತಿವಾರ, ಪ್ರತಿ ತಿಂಗಳು ನೋಡಿ ವರದಿ ಕೊಟ್ಟಿದ್ದರೆ ಈ ಪ್ರಮಾಣದ ಸಮಸ್ಯೆ ಇರುತ್ತಿರಲಿಲ್ಲ ಎಂದರು.
ವೃತ್ತದ ಮುಖ್ಯ ಅರಣ್ಯಾಧಿಕಾರಿ ವಿಜಯ್ ಮೋಹನ್‍ರಾಜ್ ಮಾತನಾಡಿ, ಎಲ್ಲ ಜಮೀನನ್ನು ಅಭಿವೃದ್ದಿ ಹೆಸರಲ್ಲಿ ಕೊಡಲಾಗಿದೆ. ಉಳಿದಿರುವುದು ಅರಣ್ಯ ಭೂಮಿ ಮಾತ್ರ. ಅದನ್ನು ಉಳಿಸಿಕೊಳ್ಳಲು ಹೆಚ್ಚಿನ ಆಧ್ಯತೆ ನೀಡಬೇಕಿದೆ. ಯೋಜನಾ ಸಿಬ್ಬಂಧಿ ಗಡಿ ಗುರುತಿಸಿ ಪಿಲ್ಲರ್ ಹಾಕಿ ಹೋಗುತ್ತಾರೆ. ಅದರ ಅಂತಿಮ ರಕ್ಷಣೆ ಕಾರ್ಯವನ್ನು ಸಂರಕ್ಷಿತ ಸಿಬ್ಬಂಧಿಗಳು ಮಾಡಬೇಕಾಗುತ್ತದೆ ಎಂದರು.
ಲ್ಯಾಂಡ್ ಗ್ರಾಬಿಂಗ್ ಪ್ರಿವೆನ್ಶನ್ ಆಕ್ಟ್ ಕಾನೂನಿಗೆ ಹೆಚ್ಚು ಬಲ ಕೊಟ್ಟಿದೆ. ಹಿಂದೆ ಜಮೀನು ಇಟ್ಟುಕೊಳ್ಳುತ್ತೇವೆ. ತೀವ್ರ ಒತ್ತಡ ಬಂದರೆ ಅರಣ್ಯ ಇಲಾಖೆಯವರು ಬಿಟ್ಟುಬಿಡುತ್ತಾರೆ ಎನ್ನುವ ಧೋರಣೆ ಇತ್ತು. ಇಂದು ಹಾಗಿಲ್ಲ. ಕಾನೂನು ಬದಲಾಗಿದೆ ಶಿಕ್ಷೆಗೂ ಅವಕಾಶವಿದೆ ಎಂದರು.
ಕಾರ್ಯಾಗಾರದಲ್ಲಿ ಭದ್ರಾ ಹುಲಿಯೊಜನೆ ನಿರ್ದೇಶಕ ಧನಂಜಯ್, ಎಪಿಪಿ ರಾಯ್ಕರ್, ಡಿಸಿಎಫ್ ಕುಮಾರ್, ಶಂಕರ್,ಎಸಿಎಫ್ ಚೆಂಗಪ್ಪ ಹಾಗೂ ಚಿಕ್ಕಮಗಳೂರು ಅರಣ್ಯ ವೃತ್ತದ ಎಸಿಎಫ್, ಆರ್‍ಎಫ್‍ಒ, ಡಿಆರ್‍ಎಫ್‍ಒಗಳು ಭಾಗವಹಿಸಿದ್ದರು.