ಮೋದಿಯ ಮನ್‌ಕಿ ಬಾತ್‌ನಿಂದ ಹೊಟ್ಟೆ ತುಂಬುವುದಿಲ್ಲ: ಮಾಜಿ ಸಚಿವ ಎಚ್.ಎಂ.ರೇವಣ್ಣ

Update: 2019-01-12 14:17 GMT

ರಾಯಚೂರು, ಜ.12: ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನಪರ ಕಾರ್ಯಕ್ರಮವು ಕೇವಲ ಮನ್‌ಕಿ ಬಾತ್‌ಗೆ ಮಾತ್ರ ಸೀಮಿತವಾಗಿದೆ. ಇದರಿಂದ ಯಾವ ಹೊಟ್ಟೆಯು ತುಂಬುವುದಿಲ್ಲವೆಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಜನಪರ ಕಾರ್ಯಕ್ರಮಗಳನ್ನ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಮನ್ ಕೀ ಬಾತ್‌ನಿಂದ ಜನರ ಹೊಟ್ಟೆ ತುಂಬಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಮುಂದಿನ ದಿನಗಳಲ್ಲಿ ರಾಷ್ಟ್ರದಿಂದ ಬಿಜೆಪಿಯನ್ನ ಹೊರಗಿಡಬೇಕು. ಹಾಗಾಗಿ ಘಟಬಂಧನ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ನಡೆಯುತ್ತಿದೆ. ಕೊಮುವಾದಿ ಬಿಜೆಪಿಯನ್ನ ದೂರ ಇಡುವುದು ನಮ್ಮ ಉದ್ದೇಶ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ನಾವು ಒಂದಾಗ್ತಿದ್ದೇವೆ. ಬಿಜೆಪಿಯವರು ಯಾವತ್ತೂ ಮೀಸಲಾತಿ ಪರವಾಗಿದ್ದವರಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋ ರೀತಿ ಇಂದಿನ ಪರಿಸ್ಥಿತಿ ಆಗಿದೆ. ಮೋದಿ ಮೀಸಲಾತಿ ಯೋಜನೆ ಚುನಾವಣಾ ಗಿಮಿಕ್ ಆಗಿದ್ದು, ಇಷ್ಟು ಸುಳ್ಳು ಹೇಳುವ ಪ್ರಧಾನಮಂತ್ರಿ ಭಾರತದ ಇತಿಹಾಸದಲ್ಲೇ ಕಂಡಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬೆಂ.ಉತ್ತರದಿಂದ ಟಿಕೆಟ್ ಕೇಳಿದ್ದೇನೆ

ನಾನು ರಾಜಕೀಯ ಜೀವನವನ್ನ ಪ್ರಾರಂಭಿಸಿದ್ದೆ ಕಾಂಗ್ರೆಸ್‌ನಿಂದ. ಸಾಮಾನ್ಯ ಕಾರ್ಯಕರ್ತನಾಗಿ ಎಐಸಿಸಿವರೆಗೂ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಸಕ್ರಿಯವಾಗಿ ಇರಬೇಕೆಂಬ ಉದ್ದೇಶದಿಂದ ಟಿಕೆಟ್ ಕೇಳಿದ್ದೇನೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದ ಕೇಳಿದ್ದೇನೆ. ಹಿಂದೆ ರಾಹುಲ್ ಗಾಂಧಿ ಆದೇಶದ ಮೇರೆಗೆ ನನ್ನದಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಇದೀಗ ಬೆಂಗಳೂರು ಉತ್ತರದಿಂದ ಸ್ಪರ್ಧಿಸುವ ಆಸಕ್ತಿ ಇದೆ.

-ಎಚ್.ಎಂ.ರೇವಣ್ಣ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News