ಮೇಲ್ಜಾತಿಯವರಿಗೆ ನೀಡುವ ಮೀಸಲಾತಿ ಕಣ್ಣೊರೆಸುವ ತಂತ್ರ: ರೈತ ಸಂಘದ ನಾಯಕ ಬಡಗಲಪುರ ನಾಗೇಂದ್ರ

Update: 2019-01-12 17:12 GMT

ಮೈಸೂರು,ಜ.12: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ಕೇಂದ್ರದ ತಂತ್ರ ಕಣ್ಣೊರೆಸುವುದಾಗಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಆಶ್ಚರ್ಯವನ್ನುಂಟುಮಾಡಿದೆ. ಇದರಿಂದ ಗ್ರಾಮೀಣ ಭಾಗದವರಿಗೇನೂ ಪ್ರಯೋಜನವಾಗುವುದಿಲ್ಲ, ಇದೊಂದು ಹುನ್ನಾರ, ಈ ಬಗ್ಗೆ ಹೆಚ್ಚಿನ ಚರ್ಚೆಗಳಾಗಬೇಕು ಎಂದು ಹೇಳಿದರು.

ಪ್ರಧಾನಿ ಮೋದಿ ಈಗಾಗಲೇ ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿರಿದ್ದಾರೆ. ಇರುವ ಉದ್ಯೋಗಗಳೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ಮೀಸಲಾತಿಯಿಂದ ಎಲ್ಲರಿಗೂ ಉದ್ಯೋಗ ಸೃಷ್ಟಿ ಸಾಧ್ಯವೇ ಇಲ್ಲ. ಜೊತೆಗೆ ಆದಾಯ ಮಿತಿಯನ್ನು ಎಂಟು ಲಕ್ಷ ಮೀಸಲಿರಿಸಿರುವುದು, ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರನ್ನು ಅದರಿಂದ ಹೊರಗಿಡುವುದು ಸಹ ನ್ಯಾಯಯುತವಲ್ಲ ಎಂದು ಹೇಳಿದರು.

ಅಲ್ಲದೆ, ಪಾಂಡವಪುರ ಸಕ್ಕರೆ ಕಾರ್ಖಾನೆ ಮುಚ್ಚಿದ್ದು, ಅದನ್ನು ಖಾಸಗಿಯವರಿಗೆ ವಹಿಸುವ ಚಿಂತನೆ ಸರ್ಕಾರ ನಡೆಸಿದೆ ಎಂದು ತಿಳಿದು ಬಂದಿದೆ. ಇದು ಸರಿಯಲ್ಲ, ಹೀಗಾಗಿ ಸರ್ಕಾರವೇ ವಹಿಸಿಕೊಂಡು ಅದನ್ನು ನಡೆಸಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News