ವಿಜಯಪುರ: ಕಾಲೇಜು ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ
Update: 2019-01-14 19:19 IST
ವಿಜಯಪುರ,ಜ.14: ಕಾಲೇಜು ವಿದ್ಯಾರ್ಥಿಗಳ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಇಂಡಿ ಪಟ್ಟಣದ ಹಿರೇಇಂಡಿ ರಸ್ತೆಗೆ ಬರುವ ಸರಕಾರಿ ಪ್ರೌಡ ಶಾಲೆ ಹತ್ತಿರ ನಡೆದಿದೆ.
ಈ ಹಿಂದೆ ಹುಡುಗಿಯೋರ್ವಳಿಗೆ ಚುಡಾಯಿದ್ದಕ್ಕೆ ಪ್ರಶ್ನಿಸಿದ್ದ ವಿದ್ಯಾರ್ಥಿಗಳ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. 15 ಯುವಕರ ತಂಡ ಸಾಮೂಹಿವಾಗಿ ಹಲ್ಲೆ ಮಾಡಿದ್ದು, ತಾಲೂಕಿನ ಚಿಕ್ಕಬೇವನೂರ ಗ್ರಾಮದ ಮಹೇಶ ನೆಲ್ಲಗಿ ಮತ್ತು ಉದಯಕುಮಾರ್ ದೊಡ್ಡಮನಿ ಹಲ್ಲೆಗೊಳಗಾದ ವಿದ್ಯಾರ್ಥಿಗಳಾದ್ದಾರೆ.
ಸದ್ಯ ಗಾಯಾಳಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಡಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.