ಶಾಮನೂರು ಶಿವಶಂಕರಪ್ಪ ನನ್ನ ತಂದೆ ಸಮಾನರು: ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-01-14 16:12 GMT

ಮೈಸೂರು,ಜ.14: ಶಾಮನೂರು ಶಿವಶಂಕರಪ್ಪನವರು ನನ್ನ ತಂದೆ ಸಮಾನ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಪೊಲೀಸ್ ಅರಕ್ಷಕ ಉಪನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಶಾಮನೂರು ಶಿವಶಂಕರಪ್ಪ ಅವರು ನನ್ನ ತಂದೆ ಸಮಾನರು. ಅವರ ಹೇಳಿಕೆ, ಪ್ರತಿ ಹೇಳಿಕೆಗಳ ಸಮರ ನಿನ್ನೆಗೆ ಮುಗಿದಿದೆ. ಎಲ್ಲವೂ ಈಗ ಮುಗಿದ ಅಧ್ಯಾಯ. ಅವರು ನನ್ನನ್ನು ವೈಯುಕ್ತಿಕವಾಗಿ ಟೀಕಿಸಿದ್ದರು. ಅದಕ್ಕೆ ನಾನು ಉತ್ತರ ಕೊಟ್ಟಿದ್ದೆ. ಅದನ್ನು ಮೀರಿ ಯಾವ ವೈಮನಸ್ಸೂ ಇಲ್ಲ. ನಿನ್ನೆಗೆ ಅದನ್ನೆಲ್ಲ ಮುಗಿಸಿದ್ದೇನೆ. ಆ ವಿಚಾರದಲ್ಲಿ ಇನ್ನು ಏನನ್ನೂ ಮಾತನಾಡುವುದಿಲ್ಲ ಎಂದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News