ಹನೂರು: ಜೂಜು ಅಡ್ಡೆಗೆ ದಾಳಿ; 6 ಮಂದಿಯ ಬಂಧನ

Update: 2019-01-15 18:22 GMT

ಹನೂರು,ಜ.15: ಕ್ಷೇತ್ರ ವ್ಯಾಪ್ತಿಯ ರಾಚಪ್ಪಾಜಿ ನಗರದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು 6 ಮಂದಿಯನ್ನು ಬಂಧಿಸಿ, 5,270 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಚಪ್ಪಾಜಿ ನಗರದ ಹೊರವಲಯದಲ್ಲಿ ಕೊತ್ತನೂರು, ಚಿಕ್ಕಲ್ಲೂರು ಗ್ರಾಮದ ಕೆಲವರು ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹನೂರು ಸಬ್‍ ಇನ್ಸ್ ಪೆಕ್ಟರ್ ನಾಗೇಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿ ಅವರಿಂದ 5,270 ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. ಬಳಿಕ ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಮುಖ್ಯಪೇದೆ ರಾಮದಾಸ್, ವಿಶ್ವನಾಥ್, ಸಿಬ್ಬಂದಿಗಳಾದ ರಾಮಶೆಟ್ಟಿ, ವೀರಭದ್ರ, ಮಾದೇಶ್ ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News