ಅಕ್ರಮ ಗಣಿಗಾರಿಕೆ ಪ್ರಕರಣ: ಶಾಸಕ ಆನಂದ್ ಸಿಂಗ್‌ಗೆ ಜಾಮೀನು ಮಂಜೂರು
ಬೆಂಗಳೂರು, ಜ.16: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶಾಸಕ ಆನಂದ್ ಸಿಂಗ್ ಬುಧವಾರ ಹಾಜರಾಗಿ, ಜಾಮೀನು ಪಡೆದರು.
ನ್ಯಾಯಾಧೀಶರ ಮುಂದೆ ಹಾಜರಾಗಿ ಕೆಲವು ವೈಯುಕ್ತಿಕ ಕಾರಣದಿಂದ ವಿಚಾರಣೆಗೆ ಬಂದಿರಲಿಲ್ಲ. ಇನ್ನು ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿ ಜಾಮೀನು ಪಡೆದಿದ್ದಾರೆ.
ಪ್ರಕರಣವೇನು: ಬಳ್ಳಾರಿಯಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಅರೋಪ ಪ್ರಕರಣ ಸಂಬಂಧ ಇಬ್ಬರು ಕಾಂಗ್ರೆಸ್ ಶಾಸಕರಿಗೆ ಕೋರ್ಟ್‌ನಿಂದ ವಾರೆಂಟ್ ಜಾರಿಯಾಗಿತ್ತು. ಇಬ್ಬರನ್ನು ಬಂಧಿಸಿ ಕೋರ್ಟ್‌ಗೆ ಕರೆತರುವಂತೆ 82 ನೆ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಬಿ.ವಿ.ಪಾಟೀಲ್‌ರಿಂದ ವಾರೆಂಟ್ ಆದೇಶ ಮಾಡಿದ್ದರು. ವಾರೆಂಟ್ ಜಾರಿಯಾದ ಮರುದಿನವೇ ನಾಗೇಂದ್ರ ಹಾಜರಾಗಿದ್ದರು. ಆದರೆ, ಆನಂದ್‌ಸಿಂಗ್ ಹಾಜರಾಗಿರಲಿಲ್ಲ.
ಪ್ರಕರಣ ಹಿನ್ನೆಲೆ: ಲೋಕಾಯುಕ್ತ ಎಸ್‌ಐಟಿಯಲ್ಲಿ 2013ರಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ಮಾಡಿ ಸಿಬಿಐ ಮತ್ತು ಲೋಕಾಯುಕ್ತ ಎಸ್‌ಐಟಿ ಚಾರ್ಜ್ ಶೀಟ್ ಸಲ್ಲಿಸಿ ಅದರಲ್ಲಿ ಬಳ್ಳಾರಿ ಅಕ್ರಮ ಗಣಿಗಾರಿಕೆ ಯಲ್ಲಿ ಇಬ್ಬರ ಹೆಸರನ್ನು ಪ್ರಸ್ತಾಪಿಸಲಾಗಿತ್ತು.