'ಬೇಟಿ ಬಚಾವೋ' ಯೋಜನೆ ಪರಿಣಾಮಕಾರಿ ಅನುಷ್ಠಾನ: ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿ

Update: 2019-01-16 16:42 GMT

ಬೆಂಗಳೂರು, ಜ.16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ದೇಶದ 25 ಜಿಲ್ಲೆಗಳಲ್ಲಿ ಗದಗ ಸಹ ಆಯ್ಕೆಯಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.

ಈ ಸಾಧನೆ ಸಕಾರಗೊಳ್ಳುವುದರಲ್ಲಿ ಶ್ರಮಿಸಿದ ಸರ್ವರಿಗೂ, ಜಿಲ್ಲಾಡಳಿತಕ್ಕೂ ತಮ್ಮ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರಿಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಡಾ.ಜಯಮಾಲ ರಾಮಚಂದ್ರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ಈ ರಾಷ್ಟ್ರೀಯ ಪುರಸ್ಕಾರ ಇನ್ನಷ್ಟು ಉತ್ಸಾಹದಿಂದ ಕೆಲಸಮಾಡಲು ಪ್ರೇರಣೆ ಎಂದಿದ್ದಾರೆ. ಜ.24 ರಂದು ನವದೆಹಲಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News