ಆಪರೇಷನ್ ಕಮಲ ರಾಜ್ಯದ ಹಿತಾಸಕ್ತಿಗೆ ಮಾರಕ: ಇಲ್ಯಾಸ್ ಮುಹಮ್ಮದ್ ತುಂಬೆ

Update: 2019-01-17 17:09 GMT

ಬೆಂಗಳೂರು, ಜ.17: ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮಾಡುತ್ತಿರುವ ಷಡ್ಯಂತ್ರಗಳು ಹಾಗೂ ಬಿಜೆಪಿ ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿರುವುದು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿವೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಅಭಿಪ್ರಾಯಿಸಿದ್ದಾರೆ.

ಬಿಜೆಪಿಯು ರಾಜ್ಯದ ಹಿತಕ್ಕಿಂತ ಮುಖ್ಯವಾಗಿ ತನ್ನ ಸ್ವಾರ್ಥ ರಾಜಕೀಯ ಹಾಗೂ ಅಧಿಕಾರದ ದುರಾಸೆಯೊಂದಿಗೆ ಶಾಸಕರ ಖರೀದಿ-ಆಮಿಷಗಳ ಕೀಳು ಮಟ್ಟದ ರಾಜಕೀಯದ ಹಿಂದೆ ಬಿದ್ದಿರುವುದು ಇದೇನು ಹೊಸತಲ್ಲ ಎಂದು ರಾಜ್ಯದ ಜನತೆ ಚೆನ್ನಾಗಿ ಮನಗಂಡಿದ್ದಾರೆ.

ರಾಜ್ಯದ ಮೈತ್ರಿ ಸರಕಾರ ಹಾಗೂ ಬಿಜೆಪಿಯು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಅರಿತುಕೊಂಡು ಕಾರ್ಯನಿರ್ವಹಿಸಬೇಕೆಂದು, ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಹಾಗೂ ಕಾಲೆಳೆಯುವ ಸ್ವಾರ್ಥ ರಾಜಕಾರಣವನ್ನು ತ್ಯಜಿಸಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News