ಮೈಸೂರು: ಡಿವೈಎಸ್ಪಿ ಮಲ್ಲಿಕ್ ತಾಯಿ ಮಹದೇವಿ ನಿಧನ

Update: 2019-01-18 17:01 GMT

ಮೈಸೂರು,ಜ.18: ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಮಲ್ಲಿಕ್ ಅವರ ತಾಯಿ ಮಹದೇವಿ (67) ಶುಕ್ರವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೂಲತಃ ಚಾಮರಾಜನಗರ ಜಿಲ್ಲೆ ಅಮಚವಾಡಿ ಗ್ರಾಮದವರಾದ ಇವರು ತಮ್ಮ ಪುತ್ರಿ ಚೆಸ್ಕಾಂ ಎಇಇ ವಿಜಯರತ್ನ ಅವರ ವಿದ್ಯಾರಣ್ಯಪುರಂ ನಿವಾಸದಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೆ ಬೈಪಾಸ್ ಸರ್ಜರಿ ಮಾಡಲಾಗಿತ್ತು. ನಿನ್ನೆ ರಾತ್ರಿ ಬಿಪಿ ಏರುಪೇರಾದ ಸಂಬಂಧ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.

ಮೃತರಿಗೆ ಡಿವೈಎಸ್ಪಿ ಮಲ್ಲಿಕ್, ಚೆಸ್ಕಾಂ ಎಇಇ ವಿಜಯರತ್ನ, ಸೇರಿದಂತೆ ಮೂವರು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶನಿವಾರ ಅವರ ಸ್ವಗ್ರಾಮ ಅಮಚವಾಡಿ ಗ್ರಾಮದ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News