ಯಾವುದೇ ನೋಬೆಲ್ ಪ್ರಶಸ್ತಿ ಇಲ್ಲದಿದ್ದರೂ ಎಸ್.ಎಲ್.ಭೈರಪ್ಪ ದೇಶಾದ್ಯಂತ ಜನಪ್ರಿಯರು: ಡಾ.ಚಂದ್ರಶೇಖರ ಕಂಬಾರ

Update: 2020-02-01 12:28 GMT

ಮೈಸೂರು, ಜ.19: ಯಾವುದೇ ನೋಬೆಲ್ ಪ್ರಶಸ್ತಿ ಇಲ್ಲದಿದ್ದರೂ ಸಾಹಿತಿ ಎಸ್.ಎಲ್.ಭೈರಪ್ಪನವರು ದೇಶಾದ್ಯಂತ ಜನಪ್ರಿಯರಾಗಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಬಣ್ಣಿಸಿದರು.

ನಗರದ ಕಲಾಮಂದಿರದಲ್ಲಿಶನಿವಾರ ಸಾಹಿತಿ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್.ಎಸ್.ಭೈರಪ್ಪ ಸಾಹಿತ್ಯೋತ್ಸವ ಉದ್ಘಾಟನೆಯನ್ನು ದೀಪ ಬೆಳಗುವ ಮೂಲಕ ನೆರವೇರಿಸಿ ಅವರು ಮಾತನಾಡಿದರು.

ಬೈರಪ್ಪ ಅವರೆದುರು ಮಾನಾಡಲು ಭಯವಾಗುತ್ತದೆ. ಭೈರಪ್ಪನವರು ನಿಖರವಾಗಿ ಖಚಿತವಾಗಿ ವಿಷಯ ಮಂಡನೆ ಮಾಡುತ್ತಾರೆ. ಅದು ನನ್ನಿಂದ ಸಾಧ್ಯವಿಲ್ಲ, ಅವರ ಮೇಲೆ ನನಗೆ ಪೂಜ್ಯ ಗೌರವ ಭಾವನೆಯಿದೆ. ನಾನು ಮುಳುಗಿದ ಸಂದರ್ಭದಲ್ಲಿ ಅವರು ನನ್ನನ್ನು ಮೇಲಕ್ಕೆತ್ತಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದ ಕಲಪತಿ ಆಗಿದ್ದ ವೇಳೆ ಪ್ರವಾಹ ಬಂದು ಅಲ್ಲಿನ ಗ್ರಂಥಾಲಯವೆಲ್ಲ ಮುಳುಗಿ ಪುಸ್ತಕವೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಆಗ ಅಲ್ಲಿಯೇ ಎಂಟು ದಿನ ಇದ್ದು ಸಮಾಧಾನ ಹೇಳಿ, ಧೈರ್ಯ ನೀಡಿ ಚೈತನ್ಯ ತುಂಬಿದ್ದರು. ಅದಕ್ಕಾಗಿ ನಾನು ಅವರಿಗೆ ವಂದನೆಗಳನ್ನು ಹೇಳಲೇಬೇಕು ಎಂದರು.

ವೈಯಕ್ತಿಕವಾಗಿ ಅವರು ನನಗೆ ಸಹಾಯ ಹಸ್ತನೀಡಿದ್ದಾರೆ. ಮೆಕಾಲೆ ಭಾರತಕ್ಕೆ ಬಂದಾಗಿನ ಶಿಕ್ಷಣ ಸಮಿತಿ ರಚನೆಯಾದ ಕುರಿತು ವಿವರಿಸಿ ಅವೆಲ್ಲ ಯಾವ ರೀತಿ ಕಾದಂಬರಿಗಳಾಗಿ ಹೊರಬಂದವು ಎಂಬುದನ್ನು ವಿವವರಿಸಿದರು.

ಪಶ್ಚಿಮಕ್ಕೆ ಮಾರು ಹೊಗಿ ಅಸ್ಮಿತೆಯನ್ನು ಕಳೆದುಕೊಳ್ಳುವ ಹೊತ್ತಿಗೆ ನಮ್ಮ ಅಸ್ಮಿತೆಯನ್ನು ಹುಡುಕ ಹೊರಟವರಿಗೆ ವಂಶವೃಕ್ಷ, ಸಂಸ್ಕಾರದಂತಹ ಕಾದಂಬಿರಯನ್ನು ನೀಡಿ ಇದರಲ್ಲಿದೆ ಎಂಬುದಾಗಿ ತಿಳಿಸಿದ್ದರು. ಯಾವುದೇ ಕೃತಿ ಇರಲಿ ಅದು ಮೂಲಕ್ಕೆ ಸಮೀಪವಾಗಿರುವುದ ಒಳ್ಳೆಯ ಅನುವಾದ. ಭೈರಪ್ಪನವರ ಒಂದೊಂದು ಕಾದಂಬರಿಯೂ ಒಂದೊಂದು ಕಥನವನ್ನು ತಿಳಿಸುತ್ತದೆ. ಅವರ ಕಥನ ಕುಮಾರವ್ಯಾಸದಲ್ಲಿ ಕೂಡಬರಲ್ಲ. ಅಷ್ಟು ಜಾಸ್ತಿ ಇರಲಿದೆ. ರವೀಂದ್ರನಾಥ್ ಟ್ಯಾಗೂರ್ ಅವರು ನೊಬೆಲ್ ಪ್ರಶಸ್ತಿ ಪಡೆದು ಗುರುತಿಸಿಕೊಂಡರು. ಆದರೆ ಭೈರಪ್ಪನವರು ನೊಬೆಲ್ ಪ್ರಶಸ್ತಿ ಇಲ್ಲದಿದ್ದರೂ ದೇಶಾದ್ಯಂತ ಗುರುತಿಸಿಕೊಂಡರು. ಭೈರಪ್ಪನವರ ಕುಟುಂಬ ವಿಸ್ತಾರವಾಗಿದೆ. ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. 24 ಭಾಷೆಗಳ್ಲಿ ಭೈರಪ್ಪನವರ ಕಾದಂಬರಿ ಜನಪ್ರಿಯವಾಗಿವೆ ಎಂದರೆ ಅವರು ವ್ಯಾಸ. ವಾಲ್ಮೀಕಿಯಷ್ಟೇ ಸಮನಾದ ಜನಪ್ರಿಯತೆ ಹೊಂದಿದ್ದಾರೆ ಎಂದರು.

ಅವರಿಗೆ ಭಾಷೆಯ ಕುರಿತು ಅಪಾರ ಕಾಳಜಿ, ಕಳಕಳಿ, ಅದಕ್ಕಾಗಿಯೇ ಅವರು ಪ್ರಾಥಮಿಕ ಹಂತದಲ್ಲಿಯೇ ಇಂಗ್ಲೀಷ್ ಶಿಕ್ಷಣ ಎಂದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರಿಗೆ ಇಂತಹ ಕಾರ್ಯಕ್ರಮವನ್ನು ಇಟ್ಟುಕೊಂಡಿರುವುದು ಸಂತೋಷದ ವಿಷಯ. ಅವರ ಬಗ್ಗೆ ನಾವೇನು ಯೋಚಿಸುತ್ತೇವೆ ಅದರ ಕುರಿತು ಕೃತಿಗಳು ಹೊರಬಂದರೆ ಕನ್ನಡ ಸಾಹಿತ್ಯ ಪ್ರಚಾರವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲೇಖಕ ಪ್ರಧಾನ ಗುರುದತ್ತ. ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ಲೇಖಕಿ ಶೆಫಾಲಿ ವೈದ್ಯ, ಶತಾವಧಾನಿ ಆರ್.ಗಣೇಶ್, ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News