ಹೃದಯಾಘಾತ: ಪೊಲೀಸ್ ಪೇದೆ ಸಾವು

Update: 2019-01-20 18:14 GMT

ಮೈಸೂರು,ಜ.20: ಪೊಲೀಸ್ ಪೇದೆಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಗಿರೀಶ್ (32) ಹೃದಯಾಘಾತದಿಂದ ಮೃತಪಟ್ಟ ಪೇದೆ. ಮೈಸೂರಿನ ವಿವಿ ಪುರಂನ ಸಂಚಾರಿ ಠಾಣೆಯಲ್ಲಿ ಗಿರೀಶ್ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಬಂದಿದ್ದ ಅವರು, ರವಿವಾರ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕಿತ್ತು.

ಬೆಳಿಗ್ಗೆ ಕರ್ತವ್ಯಕ್ಕೆ ರೆಡಿಯಾಗುತ್ತಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಮನೆಯಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News