ರಾಜ್ಯದಲ್ಲಿ 'ಆಪರೇಷನ್' ಎಂಬುದನ್ನು ಹುಟ್ಟುಹಾಕಿದ್ದೇ ಬಿಜೆಪಿ: ಎಚ್.ಎಂ.ರೇವಣ್ಣ

Update: 2019-01-20 18:24 GMT

ಮೈಸೂರು,ಜ.20: ರಾಜ್ಯದಲ್ಲಿ ಆಪರೇಷನ್ ಎಂಬುದನ್ನು ಹುಟ್ಟುಹಾಕಿದವರೇ ಬಿಜೆಪಿಯವರು. ಅವರಿಂದ ರಾಜ್ಯದಲ್ಲಿ ಅಸಮಧಾನ, ಕಿತ್ತಾಟ ಜಾಸ್ತಿಯಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಕಿಡಿಕಾರಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲು ರವಿವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರು ಆಪರೇಷ್ ಎಂಬ ಪ್ರಯೋಗ ಮಾಡಿ ರಾಜ್ಯದಲ್ಲಿ ಕಿತ್ತಾಟ, ಅಶಾಂತಿಯುಂಟಾಗಲು ಕಾರಣರಾಗಿದ್ದಾರೆ. ಆಪರೇಷನ್ ಕಮಲದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುಮ್ಮಕ್ಕು ಇದೆ ಎಂದು ಹರಿಹಾಯ್ದರು.

ರಾಮನಗರ ಖಾಸಗಿ ರೆಸಾರ್ಟ್‍ನಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಇದೆಲ್ಲಾ ಊಹಾಪೋಹ, ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುವ ಮೂಲಕ ವಿಭಿನ್ನ ಹೇಳಿಕೆ ನೀಡಿದರು.

ಬೆಂಗಳೂರು ಉತ್ತರ ಕ್ಷೇತ್ರದಿಂದ ನಾನು ಪ್ರಬಲ ಆಕಾಂಕ್ಷಿ. ನಾನು ಕೂಡ ಮಾಗಡಿ, ಹೆಬ್ಬಾಳು ಕ್ಷೇತ್ರಗಳಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೀನಿ. ಕಳೆದ 12  ವರ್ಷಗಳಿಂದ ಉತ್ತಮ ಕೆಲಸ ಮಾಡಿದ್ದೀನಿ. ನಾನೇ ಆ ಭಾಗದ ಅಭ್ಯರ್ಥಿಯಾಗಬೇಕು ಎಂದು ನಮ್ಮ ನಾಯಕರಲ್ಲಿ ಮನವಿ ಮಾಡಿದ್ದೇನೆ. ಆ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಹಿಡಿತವಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೂಡ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಯಾರು ತ್ಯಾಗ ಮಾಡಬೇಕು ಎಂಬುದನ್ನು ಎರಡು ಪಕ್ಷಗಳ ಮುಖಂಡರು ಚರ್ಚೆ ಮಾಡಿದ ಬಳಿಕ ಗೊತ್ತಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News