ಶಿವಕುಮಾರ ಸ್ವಾಮೀಜಿ ನಿಧನಕ್ಕೆ ರಂಭಾಪುರಿ ಸ್ವಾಮಿ ಸಂತಾಪ

Update: 2019-01-21 18:04 GMT
ರಂಭಾಪುರಿ ಸ್ವಾಮೀಜಿ

ಬಾಳೆಹೊನ್ನೂರು, ಜ.21: ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮಿಗಳವರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಬದುಕಿನುದ್ದಕ್ಕೂ ಕ್ರಿಯಾಶೀಲ ವ್ಯಕ್ತಿತ್ವ ಗಳಿಸಿಕೊಂಡ ಶ್ರೀಗಳು ಶೈಕ್ಷಣಿಕ ರಂಗದಲ್ಲಿ ಅದ್ಭುತ ಕ್ರಾಂತಿ ಮಾಡಿದವರು. 1930ರಲ್ಲಿ ಸಿದ್ಧಗಂಗಾ ಕ್ಷೇತ್ರದ ಅಧಿಕಾರವನ್ನು ಪಡೆದ ಅವರು ಆಚಾರ ವಿಚಾರ ಸಂಪನ್ನರಾಗಿ, 111ನೇ ವಯಸ್ಸಿನಲ್ಲಿಯೂ ಇಷ್ಟಲಿಂಗಾರ್ಚನೆಯ ಪೂಜಾ ಸಂಪನ್ನರಾಗಿ ಧರ್ಮ ಸಂಸ್ಕೃತಿ ಆದರ್ಶಗಳ ಪುನರುತ್ಥಾನಕ್ಕಾಗಿ ಶ್ರಮಿಸಿದರು. ಸುಮಾರು 10 ಸಾವಿರ ಬಡ ವಿಧ್ಯಾರ್ಥಿಗಳಿಗೆ ಅನ್ನ ಆಶ್ರಯ ನೀಡಿ ಬೆಳೆಸಿದ ಕೀರ್ತಿ ಶ್ರೀಗಳವರಿಗೆ ಸಲ್ಲುತ್ತದೆ. 2003ರಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಅವರ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀ ರಂಭಾಪುರಿ ಪೀಠದೊಂದಿಗೆ ಆತ್ಮೀಯ ಸಂಬಂಧ ಸಾಮರಸ್ಯ ಇಟ್ಟುಕೊಂಡ ಹಳೆ ತಲೆಮಾರಿನ ಅಧ್ಯಾತ್ಮ ಲೋಕದ ಅನಘ್ರ್ಯ ರತ್ನ ನಿಧನರಾದುದು ದು:ಖವನ್ನು ಉಂಟು ಮಾಡಿದೆ. ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಅವರ ಪವಿತ್ರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ಅನುಗ್ರಹಿಸಲಿ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News