ದಾವಣಗೆರೆ: ಅಡಿಕೆ ಚೀಲಗಳನ್ನು ಕದಿಯುತ್ತಿದ್ದ ಆರು ಮಂದಿಯ ಬಂಧನ

Update: 2019-01-21 18:16 GMT

ದಾವಣಗೆರೆ,ಜ.21: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೈತರಿಂದ ಖರೀದಿಸಿ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಅಡಿಕೆ ಚೀಲಗಳನ್ನು ಕದಿಯುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ. ಉದೇಶ್ ಮಾಹಿತಿ ನೀಡಿದರು.

ಬಸವಪಟ್ಟಣದ ಚಂದ್ರ ನಾಯ್ಕ(21) ಭೀಮಸಮುದ್ರದ ಭರತ್ ನಾಯ್ಕ್(26) ಚನ್ನಗಿರಿ ತಾಲೂಕಿನ ಸಮೀವುಲ್ಲಾ(25) ಜಾವೇದ್(24), ಅಂಜುಂ((45), ಹಿದಾಯತ್(25) ಬಂಧಿತರು. ಇವರಿಂದ 11.31 ಲಕ್ಷ ಮೌಲ್ಯದ 34.30  ಕ್ವಿಂಟಾಲ್ ಅಡಿಕೆ, ಕೃತ್ಯಕ್ಕೆ ಬಳಸಿದ ಮಿನಿ ಲಾರಿ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮ, ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಯಲೋದಹಳ್ಳಿ, ಕಾಶೀಪುರ ಕ್ಯಾಂಪ್ ಗ್ರಾಮದ ಸಂತೆಬೆನ್ನೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದವು. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕದ್ದು ಅಡಿಕೆ ಚೀಲಗಳನ್ನು ಶಿವಮೊಗ್ಗದ ಸಾಗರ ಮತ್ತು ಚಿತ್ರದುರ್ಗದ ಭೀಮ ಸಮುದ್ರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದರು.  

ಎ.ಎಸ್.ಐ ಶ್ರೀರಾಮರೆಡ್ಡಿ, ಗುರುಶಾಂತಯ್ಯ ಸಿಬ್ಬಂದಿಗಳಾದ ವೆಂಕಟೇಶ್, ಕರಿಬಸಪ್ಪ, ಬಾಲರಾಜ್, ಮಹೇಶ್, ಹಾಲೇಶ, ಕೆ.ಪ್ರಕಾಶ್, ಅರುಣ್ ಕುಮಾರ್, ಪರಶುರಾಮ, ಸಂದೀಪ್, ರಾಮಚಂದ್ರ ಜಾಧವ್, ರಮೇಶ್, ಮಾರುತಿ.ಸಿ.ಜಿ, ಶ್ರೀನಿವಾಸ ಎಸ್ಪಿಯವರು ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿ.ವೈ.ಎಸ್.ಪಿ ಮಂಜುನಾಥ್ ಕೆ.ಗಂಗಲ್, ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಪಿ.ಐ ಹೆಚ್.ಗುರುಬಸವರಾಜ್, ಪಿಎಸ್‍ಐ ಕಿರಣ್‍ಕುಮಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News