ಡಾ.ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿದ ಸಿಪಿಎಂ

Update: 2019-01-22 14:23 GMT

ಬೆಂಗಳೂರು, ಜ.22: ಜಾತಿ- ಮತವನ್ನು ಮೀರಿ ಪ್ರತಿನಿತ್ಯ ಹತ್ತು ಸಾವಿರಕ್ಕೂ ಅಧಿಕ ಬಡ ಮಕ್ಕಳಿಗೆ ದಾಸೋಹದೊಂದಿಗೆ ವಿದ್ಯಾರ್ಜನೆ ಮಾಡುತ್ತಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ಭಾರತ ಕಮ್ಯನಿಸ್ಟ್ ಪಕ್ಷ, ಕರ್ನಾಟಕ ರಾಜ್ಯ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಸಿದ್ದಗಂಗಾ ಮಠದ ಪೀಠಾಧಿಕಾರಿಯಾದ ನಂತರ ಕಳೆದ ಎಂಟು ದಶಕಗಳಲ್ಲಿ ರಾಜ್ಯದ ಎಲ್ಲ ಜಾತಿ-ಧರ್ಮದ ಲಕ್ಷಾಂತರ ಬಡ ಮಕ್ಕಳಿಗೆ ಉಚಿತ ವಸತಿ, ಊಟ ಹಾಗೂ ಶಿಕ್ಷಣ ನೀಡಿದ ಕೀರ್ತಿಯನ್ನು ಸ್ವಾಮೀಜಿ ಗಳಿಸಿದ್ದು, ಮಠದ ಆ್ರಯದಲ್ಲಿ ರಾಜ್ಯ ಹಾಗೂ ದೇಶದ ಇರತ ರಾಜ್ಯಗಳಲ್ಲಿ ಒಟ್ಟು 144 ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದೆ.

ಶಿಕ್ಷಣದ ಮೂಲಕ ಜನರಲ್ಲಿ ಅರಿವಿನ ಜಾಗೃತಿ ಮೂಡಿಸಿದ ಡಾ.ಶಿವಕುಮಾರ ಸ್ವಾಮೀಜಿಗಳು ಜಾತ್ಯತೀತ, ಸರ್ವಧರ್ಮ, ಸೌಹಾರ್ದತೆಯ ಪರಂಪರೆಗೆ ಪ್ರತೀಕವಾಗಿದ್ದರು. ಅವರ ಸಮಾಜಸೇವೆ ಅನುಪಮವಾಗಿದ್ದು, ಇತರರಿಗೆ ಮಾರ್ಗದರ್ಶಿ ಮಾದರಿಯಾಗಿತ್ತು ಎಂದು ಸಿಪಿಎಂ ರಾಜ್ಯ ಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News