ಸಿದ್ಧಗಂಗಾ ಶ್ರೀಗೆ 'ಭಾರತ ರತ್ನ’ ನೀಡುವುದು ತುಂಬಾ ಸಣ್ಣ ಗೌರವ: ನಾಡೋಜ ಪಾಟೀಲ ಪುಟ್ಟಪ್ಪ

Update: 2019-01-22 18:03 GMT

ಧಾರವಾಡ,ಜ.22: ತುಮಕೂರಿನ ಸಿದ್ಧಗಂಗಾ ಮಠದ ಅಮೂಲ್ಯ ರತ್ನ, ತ್ರಿವಿಧ ದಾಸೋಹಿ ಪೂಜ್ಯಶ್ರೀ ಶಿವಕುಮಾರ ಸ್ವಾಮೀಜಿಗಳು ನಮ್ಮನ್ನೆಲ್ಲ ಅಗಲಿದ್ದಾರೆ. ಅವರಿಗೆ 'ಭಾರತರತ್ನ’ ಪ್ರಶಸ್ತಿ ಯನ್ನು ಕೊಟ್ಟು ಗೌರವಿಸಬೇಕು ಎನ್ನುವ ಮಾತುಗಳು ಕೇಳಿಬರತೊಡಗಿವೆ. ಆದರೆ ನನ್ನ ದೃಷ್ಟಿಯಲ್ಲಿ  ಅವರಿಗೆ 'ಭಾರತರತ್ನ’ ಪ್ರಶಸ್ತಿಯನ್ನು ನೀಡುವುದು ತುಂಬಾ ಸಣ್ಣ ಗೌರವ ಎಂದು ನಾನು ಭಾವಿಸಿದ್ದೇನೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.

ಅವರಿಗೆ 'ಭಾರತರತ್ನ’ಕ್ಕಿಂತ ಬಹುದೊಡ್ಡ ಪ್ರಶಸ್ತಿಯನ್ನು ಕೊಡಬೇಕು. ಭಾರತರತ್ನ ಪ್ರಶಸ್ತಿಗಿಂತ ಮೀಗಿಲಾದ ;ಲೋಕ ರತ್ನಾಕರ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಬೇಕೆಂದು ನನ್ನ ಭಾವನೆ ಎಂದು ಆಶಯ ವ್ಯಕ್ತಪಡಿಸಿದರು.

ಅವರು ಜಗತ್ತಿನಲ್ಲಿ ಯಾರೊಬ್ಬರೂ ಮಾಡದೇ ಇರುವಂಥ ಮಹತ್ಕಾರ್ಯವನ್ನು ಮಾಡಿದ್ದಾರೆ. ಅವರಿಗೆ ಯಾವ ಪ್ರಶಸ್ತಿಯನ್ನು ನೀಡಿದರೂ ಅದು ತುಂಬಾ ಸಣ್ಣದೆನಿಸುತ್ತದೆ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News