×
Ad

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗಳ ಮೇಲೆ ದಾಳಿ: 42 ಸಿಲಿಂಡರ್ ಸಹಿತ ನಗದು ವಶ

Update: 2019-01-23 22:16 IST
ಸಾಂದರ್ಭಿಕ ಚಿತ್ರ

ಮೈಸೂರು, ಜ.23: ಮೈಸೂರು ನಗರ ಸಿಸಿಬಿ ಪೊಲೀಸರು ಮಾಹಿತಿ ಮೇರೆಗೆ ನಗರದ 3 ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಒಟ್ಟು 42 ಸಿಲಿಂಡರ್ ಗಳು, 11,250 ರೂ. ನಗದು ಹಾಗೂ ರೀಫಿಲ್ಲಿಂಗ್ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಲೋಕನಾಯಕನಗರ, ಹೆಬ್ಬಾಳು ಮುಖ್ಯ ರಸ್ತೆ, ಸಂಜೀವಿನ ಸರ್ಕಲ್ ಬಳಿ ಇರುವ ಮಂಡ್ಯ ದುಷ್ಯಂತ್ ಎಂಟರ್ಪ್ರೈಸಸ್ ಅಂಗಡಿ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಪ್ರದೀಪ್ (32) ಎಂಬಾತನನ್ನು ದಸ್ತಗಿರಿ ಮಾಡಿ ಗೃಹಬಳಕೆಯ ಸಿಲಿಂಡರ್ ಗಳು ಸೇರಿದಂತೆ ಒಟ್ಟು 9 ಸಿಲಿಂಡರ್ ಗಳು, ನಗದು ಹಣ 7,330 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ಲೋಕನಾಯಕನಗರ, ಹೆಬ್ಬಾಳು ಮುಖ್ಯ ರಸ್ತೆ, ಬಾಲಾಜಿ ಸ್ಟೀಲ್ ಭಂಡಾರ್ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ರಾಮ್‍ಲಾಲ್ ಬಿನ್ ನೀಮರಾಮ(35) ಲೋಕನಾಯಕ ನಗರ, ಎಂಬಾತನನ್ನು ದಸ್ತಗಿರಿ ಮಾಡಿ ಗೃಹಬಳಕೆಯ ಸಿಲಿಂಡರಗಳು ಸೇರಿದಂತೆ ಒಟ್ಟು 20 ಸಿಲಿಂಡರ್ ಗಳು, 3,680 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಬ್ಬಾಳು 1ನೇ ಹಂತದ ಎಸ್.ಬಿ.ಎಂ. ರಸ್ತೆಯಲ್ಲಿರುವ ಶಿವ ಎಲೆಕ್ಟ್ರಿಕಲ್ಸ್ ಅಂಗಡಿಯ ಮೇಲೆ ದಾಳಿ ಮಾಡಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಶಶಿಧರ್ (38) ಎಂಬಾತನನ್ನು ದಸ್ತಗಿರಿ ಮಾಡಿ ಗೃಹಬಳಕೆಯ ಸಿಲಿಂಡರ್ ಗಳು ಸೇರಿದಂತೆ ಒಟ್ಟು 13 ಸಿಲಿಂಡರ್ ಗಳು, 240 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಡಿಸಿಪಿ ಡಾ. ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಬಿ.ಆರ್ ಲಿಂಗಪ್ಪರವರ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಲ್ಲೇಶ್, ಎ.ಎಸ್.ಐ ರಾಜು, ಸಿಬ್ಬಂದಿಗಳಾದ ಜೋಸೆಫ್ ನರೋನ, ಶ್ರೀನಿವಾಸ್ ಪ್ರಸಾದ್, ಅರುಣ್ ಕುಮಾರ್, ರಘು, ಶ್ರೀನಿವಾಸ್, ಧನಂಜಯ್ ಹಾಗೂ ಆಹಾರ ನಿರೀಕ್ಷಕರಾದ ಅನುಸೂಯ ಕಾರ್ಯಚರಣೆ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News