ದಟ್ಟ ಮಂಜು: ರಸ್ತೆ ಕಾಣದೆ ಹರಿಹರದಲ್ಲಿ ಸರಣಿ ಅಪಘಾತ
Update: 2019-01-23 23:44 IST
ಹರಿಹರ,ಜ.23: ಬೆಳಗಿನ ಜಾವ ಮಂಜು ಬಿದ್ದ ಪರಿಣಾಮ ರಸ್ತೆ ಕಾಣದೇ ರಾಷ್ಟ್ರೀಯ ಹೆದ್ದಾರಿ- 4ರ ಹನಗವಾಡಿ ಬಳಿ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಜಿಲ್ಲಾದ್ಯಂತ ಬುಧವಾರ ಬೆಳಗ್ಗೆ ಮಂಜು ಕವಿದ ವಾತಾವರಣವಿದ್ದು, ಬೆಳಗ್ಗೆ 8.30ರ ತನಕವೂ ಮೋಡ ಕವಿದ ಪರಿಣಾಮ ಹೆದ್ದಾರಿ 4ರಲ್ಲಿ ಮೂರು ಲಾರಿ ಒಂದು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ರಸ್ತೆ ಕಾಣದ ಹಾಗೇ ಇರುವ ಮಂಜಿನಿಂದಾಗಿ ಹರಿಹರದ ಹನಗವಾಡಿ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.