×
Ad

ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕೊಡಗಿನ ವಿದ್ಯಾರ್ಥಿಗಳು

Update: 2019-01-23 23:53 IST

ಮಡಿಕೇರಿ, ಜ.23: ಬೆಂಗಳೂರಿನ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ಜ.26ರಂದು ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ಗೈಡ್ಸ್ ವಿದ್ಯಾರ್ಥಿಗಳಾದ ಪಿ.ಡಿ.ಬಬಿತಾ, ಬಿ.ಜಿ.ಸಿಂಚನಾ ದೇಚಕ್ಕ, ವಂಶಿಕಾ ವಿ., ಆರುಶಿ ಅಯ್ಯಪ್ಪ ಕೆ., ಮಡಿಕೇರಿ ಸಂತ ಮೈಕಲರ ಪ್ರಾಥಮಿಕ ಶಾಲೆಯ ಗೈಡ್ಸ್ ವಿದ್ಯಾರ್ಥಿನಿ ಜೀವಿತಾ ಎಂ.ಆರ್., ಎಸ್‌ಎಂಎಸ್ ಎಸಿಇಇ ಅರಮೇರಿ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಾದ ಬೇವನ್ ಗಣಪತಿ ಎಂ.ಎ. ಮತ್ತು ವಜಿಶ್ ಎಸ್.ಬಿ. ಇವರು ಜ.19 ರಿಂದ ಬೆಂಗಳೂರಿನಲ್ಲಿ ಶಿಕ್ಷಕರಾದ ಸ್ಕೌಟ್ ಮಾಸ್ಟರ್ ಭೀಮಯ್ಯ, ಗೈಡ್ಸ್ ಕ್ಯಾಪ್ಟನ್ ಮೈಥಿಲಿರಾವ್ ಅವರ ನೇತೃತ್ವದಲ್ಲಿ ನಡೆದ ಪಥ ಸಂಚಲನದ ಪೂರ್ವ ಸಿದ್ಧತಾ ತರಬೇತಿಯಲ್ಲಿ ತೊಡಗಿದ್ದರು. ಹಾಗೆಯೇ ರಾಜ್ಯದ ಭಾರತ ಸ್ಕೌಟ್ಸ್ ಗೈಡ್ಸ್ ತಂಡದ ನಾಯಕಿಯಾಗಿ ಬಿ.ಡಿ.ಬಬಿತಾ ತಂಡವನ್ನು ಮುನ್ನಡೆಸಲು ಆಯ್ಕೆಯಾಗಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕಂಬೀರಂಡ ಕಾಳಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News