ಸಿವಿಲ್ ನ್ಯಾಯಾಲಯಗಳ ಪ್ರಕರಣಗಳ ಇತ್ಯರ್ಥಕ್ಕೆ ಧಾರವಾಡದಲ್ಲಿ ಮೀಡಿಯೇಶನ್ ಸಂಸ್ಥೆ ಸ್ಥಾಪನೆ

Update: 2019-01-25 18:15 GMT

ಧಾರವಾಡ, ಜ.25: ಸಿವಿಲ್ ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಧಾರವಾಡದಲ್ಲಿ ಪರ್ಯಾಯ ನ್ಯಾಯಾಲಯ ಮಾದರಿಯಲ್ಲಿ ಮೀಡಿಯೇಶನ್ ಸಂಸ್ಥೆಯನ್ನು ಪ್ರಾರಂಭವಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರ್ಯಾಯ ಸಂಸ್ಥೆಯೊಂದು ಪ್ರಾರಂಭವಾಗುತ್ತಿದೆ. ಮೀಡಿಯೇಶನ್ ಮತ್ತು ಆರ್ಬಿಟ್ರೇಶನ್ ಕೌನ್ಸಿಲ್, ಧಾರವಾಡ ಎಂಬ ಹೆಸರಿನ ಸಂಸ್ಥೆ ಇದಾಗಿದ್ದು, ಸಿವಿಲ್ ನ್ಯಾಯಾಲಯಗಳಲ್ಲಿ ನಡೆಯುವ ನ್ಯಾಯ ತೀರ್ಪು ಪದ್ಧತಿಯ ಮಾದರಿಯಲ್ಲಿಯೇ ಇಲ್ಲಿ ನ್ಯಾಯ ತೀರ್ಮಾನ ಆಗುತ್ತದೆ ಎಂದು ಮಿಡಿಯೇಶನ್ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಕಣವಿ ಹೇಳಿದರು.

ಜನವರಿ 29ರಂದು ನಗರದಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಭವನದಲ್ಲಿ ಸಂಸ್ಥೆಯು ಉದ್ಘಾಟನೆ ಆಗಲಿದ್ದು, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾ. ಎನ್.ಸಂತೋಷ ಹೆಗ್ಡೆ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News