ಮೈಸೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ನೇಮಕ
Update: 2019-01-25 23:56 IST
ಮೈಸೂರು,ಜ.25:- ಮೈಸೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅವರನ್ನು ನಿಯೋಜಿಸಿ ಸರ್ಕಾರ ಆದೇಶಿಸಿದೆ.
ಬೆಂಗಳೂರು ಗುಪ್ತಚರ ವಿಭಾಗದ ವರಿಷ್ಠಾಧಿಕಾರಿಯಾಗಿದ್ದ ಇವರನ್ನು ಡಿಐಜಿಪಿ ದರ್ಜೆಗೆ ಭಡ್ತಿ ನೀಡಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಇವರು ಮೂಲತಃ ಮೈಸೂರಿನವರೇ ಆಗಿದ್ದಾರೆ. ಇವರೊಂದಿಗೆ ಒಟ್ಟು ನಾಲ್ವರು ಅಧಿಕಾರಿಗಳನ್ನು ಡಿಐಜಿಪಿ ಭಡ್ತಿಯೊಂದಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಇಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಎ.ಸುಬ್ರಹ್ಮಣ್ಯೇಶ್ವರಾವ್ ಅವರಿಗೆ ಇನ್ನೂ ಸ್ಥಳ ತಿಳಿಸಿಲ್ಲ ಎನ್ನಲಾಗಿದೆ.