ಕೊಳ್ಳೇಗಾಲ ತಾಲ್ಲೂಕು ಆಡಳಿತ ವತಿಯಿಂದ ಗಣರಾಜ್ಯೋತ್ಸವ

Update: 2019-01-26 17:29 GMT

ಕೊಳ್ಳೇಗಾಲ, ಜ. 26: ಸಾವಿರಾರು ಜಾತಿ ಭಾಷೆ, ನೂರಾರು ಧಾರ್ಮಿಕತೆ ಒಂದಿ ಏಕತೆಯಿಂದ ಬದುಕುವುದನ್ನು ನಮ್ಮ ಸಂವಿಧಾನ ನೀಡಿದೆ. ಇದರ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಷನಲ್ ಮ್ಯೆದಾನದಲ್ಲಿ ಶನಿವಾರ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 70 ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಬ್ರಿಟೀಷರ ಕಾಲದಲ್ಲಿ 543 ಸಂಸ್ಥಾನ ಭಾವುಟ ಹಾರಡುತ್ತಿತು ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿ ಸಂವಿಧಾನ ಜಾರಿಗೆ ಬಂದ ಬಳಿಕ ತ್ರಿವರ್ಣ ಧ್ವಜ ಮಾತ್ರ ಹಾರಾಡುತ್ತಿದೆ ಎಂದು ತಿಳಿಸಿದರು.

ದೇಶದ ನೀತಿ ನಿಯಮ ರೂಪಿಸಲು ಏಳು ಜನರ ಕರಡು ಸಮಿತಿ ನೇಮಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 1950ರಲ್ಲಿ ಸಂವಿಧಾನ ಜಾರಿಗೆ ಬಂತು. ಭಾರತದ ಸಂವಿಧಾನ ರಾಷ್ಟ್ರಕ್ಕೆ ವೈವಿಧ್ಯಮಯವಾದ ಐಕ್ಯತೆ, ಸಾರ್ವಭೌಮತೆ ಸಮಾನತೆ ಒಳಗೊಂಡದ್ದಾಗಿದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ ಬಂದ ದಿನ. ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ. ಅದೇ ರೀತಿ ಜನವರಿ 26 ಸಂವಿಧಾನ ಜಾರಿಗೆ ಬಂದ ದಿನವಾಗಿದ್ದು ಇದು ಸಂವಿಧಾನ ದಿನಾಚರಣೆಯಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹನೂರು ಶಾಸಕ ಆರ್.ನರೇಂದ್ರ ಅವರು ಉದ್ಘಾಟಿಸಿ ಮಾತನಾಡಿದ ಅವರು ಇಡೀ ಪ್ರಪಂಚದಲ್ಲೇ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಟ ಎಂದರು ಬ್ರಿಟನ್, ಅಮೇರಿಕಾ, ಆಸ್ಟ್ರೇಲಿಯಾದಂತಹ ದೊಡ್ಡ ದೊಡ್ಡ ರಾಷ್ಟ್ರಗಳು ಸಹ ನಮ್ಮ ಸಂವಿಧಾನದವನ್ನು ಮೆಚ್ಚಿ ಮಾತನಾಡಿವೆ. ಅನೇಕ ವೈವಿದ್ಯತೆಯ ದೇಶದಲ್ಲಿ 6.200 ಜಾತಿ, 1652 ಭಾಷೆ ನೂರಾರು ಧರ್ಮಗಳು ಇರುವ ಈ ದೇಶಕ್ಕೆ ಯಾರ ಭಾವನೆಗಳಿಗೂ ತೊಂದರೆಯಾಗದಂತಹ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದ್ದಾರೆ ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶಾಂತರಾಜು ಅವರು ಮಾತನಾಡಿ ದೇಶ, ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಸುದೀರ್ಘ ಉಪನ್ಯಾಸ ನೀಡಿದರು.

ಪ್ರಭಾರ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಧ್ವಜಾರೋಹಣ ನೇರವೇರಿಸಿದರು. ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಅನೇಕ ರೀತಿಯ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಮಾರಂಭದಲ್ಲಿ ತಾ.ಪಂ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷೆ ಲತಾರಾಜಣ್ಣ, ಜಿ.ಪಂ ಸದಸ್ಯ ಕಮಲ್, ಎಪಿಎಂಸಿ ಅಧ್ಯಕ್ಷ ಗೋವಿಂದರಾಜು, ಕ.ಸಾ.ಪ ಅಧ್ಯಕ್ಷ ನಂಜುಂಡಸ್ವಾಂಇ, ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಉಮೇಶ್, ಪೌರಾಯುಕ್ತ ನಾಗಶೆಟ್ಟಿ, ಬಿ.ಇ.ಒ ಚಂದ್ರಪಾಟೀಲ್, ವೃತ್ತ ನಿರೀಕ್ಷಕ ಶ್ರೀಕಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News