ಹುತಾತ್ಮ ಯೋಧ ನಝೀರ್ ವಾನಿಗೆ ಅಶೋಕ ಚಕ್ರ ಪ್ರದಾನ

Update: 2019-01-26 18:00 GMT

ಉಗ್ರರೊಂದಿಗೆ ಹೋರಾಡುತ್ತ ಹುತಾತ್ಮರಾದ ಯೋಧ ಲ್ಯಾನ್ಸ್ ನಾಕ್ ನಝೀರ್ ಅಹ್ಮದ್ ವಾನಿ ಅವರಿಗೆ ಶನಿವಾರ ಭಾರತದ ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಲಾಯಿತು. ರಾಜಪಥದಲ್ಲಿ ಶನಿವಾರ ನಡೆದ ಗಣರಾಜ್ಯೋತ್ಸವದ ಸಂದರ್ಭ ವಾನಿಯ ತಾಯಿ ಮತ್ತು ಪತ್ನಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ವಾನಿ ಅಶೋಕ ಚಕ್ರ ಪಡೆದ ಮೊದಲ ಕಾಶ್ಮೀರಿ ಯೋಧರಾಗಿದ್ದಾರೆ. ನವೆಂಬರ್ 25ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನದ ಬಟಗುಂಡ್ ಸಮೀಪದ ಹೀರಾಪುರ್ ಗ್ರಾಮದಲ್ಲಿ ನಡೆದ ಭಯೋತ್ಪಾದಕನಿಗ್ರಹ ಕಾರ್ಯಾಚರಣೆಯಲ್ಲಿ ವಾನಿ ಹುತಾತ್ಮರಾಗಿದ್ದರು. ಗುಂಡಿನೇಟಿನಿಂದ ತೀವ್ರ ಗಾಯಗೊಂಡಿದ್ದರೂ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವಾನಿ ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಸಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor