ರೈತರ ಸಾಲ ಮನ್ನಾ ಯೋಜನೆ: 2.9 ಲಕ್ಷ ಸಾಲ ಖಾತೆಗಳಿಗೆ 1,440 ಕೋಟಿ ರೂ.ಬಿಡುಗಡೆ

Update: 2019-01-28 17:29 GMT

ಬೆಂಗಳೂರು, ಜ. 28: ರೈತರ ಬೆಳೆಸಾಲ ಮನ್ನಾ ಯೋಜನೆಯಡಿ ಜ.28ರ ವರೆಗೆ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಒಟ್ಟು 2.9 ಲಕ್ಷ ಸಾಲ ಖಾತೆಗಳಿಗೆ 1,440 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಜ.28ರ ವರೆಗೆ ಸಹಕಾರಿ ಬ್ಯಾಂಕುಗಳ 1.4 ಲಕ್ಷ ಸಾಲ ಖಾತೆಗಳಿಗೆ 768 ಕೋಟಿ ರೂ.ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ 150125 ಸಾಲ ಖಾತೆಗಳಿಗೆ 672.5 ಕೋಟಿ ರೂ.ಬೆಳೆಸಾಲ ಮನ್ನಾ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News