×
Ad

ಮೈತ್ರಿ ಸರ್ಕಾರ ಆಕಸ್ಮಿಕ: ವಿಶ‍್ವೇಶ್ವರ ಹೆಗಡೆ ಕಾಗೇರಿ

Update: 2019-01-28 22:45 IST

ಧಾರವಾಡ, ಜ.28: ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ವಿಶ್ವೇಶ್ವರ ಹೆಗಡೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರವು ಆಕಸ್ಮಿಕವಾಗಿ ರಚನೆಯಾಗಿದೆ ಎಂದು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪವಿತ್ರವಾದ ಮೈತ್ರಿಯ ಫಲದ ಸರ್ಕಾರ ಇದಾಗಿದೆ. ಅವಕಾಶವಾದಿ ರಾಜಕಾರಣದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮಾಡಿವೆ. ಆರಂಭದಿಂದಲೂ ಹೊಂದಾಣಿಕೆ ಇಲ್ಲದೇ ನಡೆಯುತ್ತಿದ್ದಾರೆ. ಆಂತರಿಕ ಕಚ್ಚಾಟ, ಒಳಜಗಳ ಹೆಚ್ಚಾಗಿದೆ ಎಂದರು.

ಬಿಜೆಪಿಯವರು ಹೀಗೆ ಜಗಳ ಮಾಡಿ ಅಂತಾ ಹೇಳಿಲ್ಲ. ಆದರೆ ಅವರೇ ಇದನ್ನೆಲ್ಲ ಸೃಷ್ಟಿಸಿಕೊಂಡಿದ್ದಾರೆ. ಮೊದಲಿನಿಂದಲೂ ಅಸ್ಥಿರತೆಯಲ್ಲೇ ಸರ್ಕಾರ ಇದೆ. ಆ ಅಸ್ಥಿರತೆಯನ್ನೇ ಈಗ ಸಿಎಂ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಸಿಎಂ ಸ್ಥಾನ ಬಿಡಲೂ ಆಗುವುದಿಲ್ಲ, ಮುಂದುವರಿಸಲೂ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಇಂತಹ ಸ್ಥಿತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿದ್ದಾರೆ. ಅವರ ಆಂತರಿಕ ಒಳಜಗಳ, ಕಚ್ಚಾಟದಿಂದ ಈ ಸರ್ಕಾರ ಸ್ಥಿರವಾಗಿ ನಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News