×
Ad

ಫೆ.10ಕ್ಕೆ ಅಖಿಲ ಭಾರತ ನೋಟರಿ ಸಮ್ಮೇಳನ

Update: 2019-01-28 23:21 IST

ಬೆಂಗಳೂರು, ಜ.28: ಕರ್ನಾಟಕ ರಾಜ್ಯ ನೋಟರಿ ಸಂಘದ ವತಿಯಿಂದ ಫೆ.10ರಂದು ಅಖಿಲ ಭಾರತ ನೋಟರಿ ಸಮ್ಮೇಳನವನ್ನು ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಮಂಗಳ ಮಂಟಪದಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ನೋಟರಿ ಸಂಘದ ಅಧ್ಯಕ್ಷ ಆಸೀಫ್ ಆಲಿ, ಸಮ್ಮೇಳನವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾ.ಎಂ.ಮೋಹನ್ ಶಾಂತನಗೌಡ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ, ಹೈಕೋರ್ಟ್ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಮೀನುಗಾರಿಕೆ ಸಚಿವ ವೆಂಕಟ್‌ರಾವ್ ನಾಡಗೌಡ, ಹಾಗೂ ಅಖಿಲ ಭಾರತ ನೋಟರಿ ಸಂಘದ ಅಧ್ಯಕ್ಷ ಟಿ.ಶಾ.ಧೀರೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದೇಶದ ನೋಟರಿಗಳ ಅಭಿವೃದ್ಧಿ ಹಾಗೂ ಕರ್ತವ್ಯಪಾಲನೆ, ಉಚಿತ ಕಾನೂನಿನ ಸಲಹೆಗಾಗಿ ನೋಟರಿಯನ್ನು ನೇಮಿಸುವ ಬಗ್ಗೆ, ನೋಟರಿಗಳ ಕ್ಷೇಮಾಭಿವೃದ್ಧಿ ಟ್ರಸ್ಟನ್ನು ಅಭಿವೃದ್ಧಿ ಪಡಿಸುವುದು ಸೇರಿದಂತೆ ಈಗಾಗಲೇ ನೋಟರಿಗಳನ್ನು ಕೋರ್ಟ್ ಕಮೀಷನರ್, ರಿಸೀವರ್, ಕಾನ್ಸಲೇಟರ್, ಸಾಕ್ಷಗಳ ವಿಚಾರಣೆ ಅವುಗಳ ವಿವರವಾಗಿ ನೋಟರಿ ಕಾಯ್ದೆಯಲ್ಲಿ ಇರುವ ನಿಯಮಗಳನ್ನು ಜಾರಿಗೆ ತರುವಂತೆ ಸಮ್ಮೇಳದಲ್ಲಿ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News