ಸುಳ್ಳು ಚರಿತ್ರೆಗಳು

Update: 2019-01-29 18:39 GMT

ಮಾನ್ಯರೇ,

ದಿಲ್ಲಿಯ ಒಂದು ಸಂಘಟನೆ ಇತ್ತೀಚೆಗೆ ವಿಕ್ಟೋರಿಯ ರಾಣಿಯ ಸ್ಮರಣೆ ನಡೆಸಿತು. ಸುಳ್ಳು ಚರಿತ್ರೆಗಳನ್ನು ಪೋಣಿಸಿ ಯುಗಯಗಾಂತರಗಳಲ್ಲಿ ತಪ್ಪು ಕಲ್ಪನೆಗಳಿಗೆ ಸಾಕ್ಷಿಯಾದ ಬ್ರಿಟಿಷರ ಬರಹಗಳಿಂದ ಪ್ರೇರಿತವಾದವರು ಮಾತ್ರ ಇಂತಹ ಆಚರಣೆಗಳನ್ನು ಮಾಡಲು ಸಾಧ್ಯ! ಸುಳ್ಳನ್ನು ಸತ್ಯವಾಗಿಸುವ ಗೂಢ ತಂತ್ರದ ಫಲವೂ ಇದರಲ್ಲಿ ಅಡಕವಾಗಿದೆಯಷ್ಟೆ. ಸಹಸ್ರಾರು ಭಾರತೀಯರನ್ನು ವಿನಾ ಕಾರಣ ಕೊಲೆ ಗೈದಿದ್ದವರು, ಜೈಲ್ಗೆ ಕಳುಹಿಸಿದವರು ಈಗ ಹೀರೋಗಳಾಗುತ್ತಾರೆ. ಶಾಂತಿಯುತ ಆಡಳಿತ ನಡೆಸಿ ಸಹ ಬಾಳ್ವೆಗೆ ಒತ್ತು ಕೊಟ್ಟವರು, ಅಸ್ಪೃಶ್ಯತೆ ತೊಲಗಿಸಿ ಸಮಾನತೆಯನ್ನು ಪ್ರತಿಪಾದಿಸಿದವರು ಕೋಮುವಾದಿಗಳು, ದೇಶದ್ರೋಹಿ ಗಳೆನಿಸಿಕೊಳ್ಳುತ್ತಿರುವುದು ವಿಪರ್ಯಾಸ! ಭವಿಷ್ಯದಲ್ಲಿ ಇಂತಹ ಸುಳ್ಳು ಚರಿತ್ರೆಗಳಿಂದ ಯುವ ಪೀಳಿಗೆ ಸಂಪೂರ್ಣ ಹಾದಿ ತಪ್ಪುವುದೇ ಜಾಸ್ತಿ. ಹಾಗಾಗದಿರಲಿ ಎಂಬುವುದೇ ದೇಶ ಪ್ರೇಮಿಗಳ ಕೋರಿಕೆ.
 

Writer - -ಎಂ.ಕೆ. ಕಾಮಿಲ್, ಕಾಪು

contributor

Editor - -ಎಂ.ಕೆ. ಕಾಮಿಲ್, ಕಾಪು

contributor

Similar News