ಏರ್ ಶೋಗೆ ತಯಾರಿ

Update: 2019-01-30 18:10 GMT

ಏರ್ ಶೋ 2019ಕ್ಕೆ ಬೆಂಗಳೂರಿನ ವಾಯುನೆಲೆಯಲ್ಲಿ ಅಂತಿಮ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಫೆ.20ರಿಂದ 24ರವರೆಗೆ ಏರ್ ಶೋ ನಡೆಯಲಿದೆ. ಈ ಬಾರಿಯೂ ರಫೆಲ್ ಯುದ್ಧ ವಿಮಾನ ಹಾರಾಟ ನಡೆಸಲಿದೆ ಎಂದು ವಾಯುಪಡೆ ಅಧಿಕಾರಿ ಏರ್ ಕಮಾಂಡಿಂಗ್ ಆಫೀಸರ್ ರೋರಿ ತಿಳಿಸಿದರು. ಬೆಳಗ್ಗೆ 10ರಿಂದ 12ರ ತನಕ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5 ರತನಕ ವೈಮಾನಿಕ ಪ್ರದರ್ಶನವಿರುತ್ತದೆ. ಫೆ.20ರಂದು ಏರ್ ಶೋ ಉದ್ಘಾಟನೆಯಾಗಲಿದೆ. ಇಲ್ಲಿಯವರೆಗೆ 31 ವಿಮಾನಗಳು ವೈಮಾನಿಕ ಪ್ರದರ್ಶನ ಹಾಗೂ 22 ವಿಮಾನಗಳು ಕೇವಲ ಪ್ರದರ್ಶನಕ್ಕೆ ನೋಂದಣಿ ಮಾಡಿಕೊಂಡಿವೆ. 365 ರಕ್ಷಣಾ ಕೇತ್ರಕ್ಕೆ ಸಂಬಂಧಿತ ಕಂಪನಿಗಳು ನೋಂದಣಿ ಮಾಡಿಕೊಂಡಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor