ಬಾಲ್‌ಬ್ಯಾಡ್ಮಿಂಟನ್ ಪಂದ್ಯ: ನಿಹಾರಿಕಾ ರಾಷ್ಟ್ರಮಟ್ಟದ ಸಾಧನೆ
Update: 2019-01-31 23:08 IST
ತೀರ್ಥಹಳ್ಳಿ, ಜ.31: ಇತ್ತೀಚೆಗೆ ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮಣಿಪಾಲ ಸಮೂಹ ಸಂಸ್ಥೆಗೆ ಸೇರಿದ ಆಗುಂಬೆಯ ಅನ್ನಪೂರ್ಣ ವಿದ್ಯಾಮಂದಿರದ 9ನೇ ತರಗತಿಯ ವಿದ್ಯಾರ್ಥಿನಿ ನಿಹಾರಿಕಾ ರಾಜ್ಯವನ್ನು ಪ್ರತಿನಿಧಿಸಿ ಅತ್ಯುತ್ತಮ ಸಾಧನೆ ತೋರಿದ್ದಾರೆ.