ರಾಷ್ಟ್ರಮಟ್ಟದ ಅಬಾಕಸ್ ಪರೀಕ್ಷೆ: ಶ್ರೀನಿಧಿಗೆ ಪ್ರಥಮ ಸ್ಥಾನ
Update: 2019-01-31 23:09 IST
ಅಂಕೋಲಾ, ಜ.31: ಪಟ್ಟಣದ ಕೆನರಾ ವೆಲ್ಫೇರ್ ಟ್ರಸ್ಟಿನ ಡಾ.ದಿನಕರ ದೇಸಾಯಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಶ್ರೀನಿಧಿ ಸಂದೀಪ ಟೇಂಗ್ಸೆ ಇವರು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಐಡಿಯಲ್ ಪ್ಲೇ ಅಬಾಕಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿರುವ ಜೊತೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ ಪಡೆದು ಅಂಕೋಲಾಕ್ಕೆ ಕೀರ್ತಿ ತಂದಿದ್ದಾರೆ. ಇವರು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯದ ನೌಕರ ಸಂದೀಪ, ಶಿಕ್ಷಕಿ ನೂತನಾ ದಂಪತಿಯ ಪುತ್ರಿ.