ನಾನು ಪ್ರಕಟಿಸಿದ್ದ ‘ರೈತ ಬೆಳಕು’ ಯೋಜನೆಯ ನಕಲು: ಸಿದ್ದರಾಮಯ್ಯ
Update: 2019-02-01 20:14 IST
ಬೆಂಗಳೂರು, ಫೆ.1: ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಪ್ರಕಟಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು 2018-19ನೆ ಸಾಲಿನ ಬಜೆಟ್‌ನಲ್ಲಿ ನಾನು ಪ್ರಕಟಿಸಿದ್ದ ‘ರೈತ ಬೆಳಕು’ ಯೋಜನೆಯ ಅರ್ಧ ನಕಲು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಕಾರ 2 ಹೆಕ್ಟೇರ್ ಗಿಂತ ಕಡಿಮೆ ಹಿಡುವಳಿಯ ರೈತರಿಗೆ ವಾರ್ಷಿಕ 6000 ರೂ.ಮೊತ್ತವನ್ನು ಮೂರು ಕಂತುಗಳಲ್ಲಿ (ತಲಾ 2 ಸಾವಿರ ರೂ.ಗಳಂತೆ) ನೀಡಲಾಗುತ್ತದೆ. ಅಂದರೆ ಪ್ರತಿ ಹೆಕ್ಟೇರ್‌ಗೆ ಮೂರು ಸಾವಿರ ರೂಪಾಯಿ. ಆದರೆ ನಮ್ಮ ಯೋಜನೆಯ ಪ್ರಕಾರ ಹೆಕ್ಟೇರ್ ಗೆ 5 ಸಾವಿರ ರೂ.ನೀಡಲಾಗುತ್ತದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.