ಹನೂರು: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಿಂದ ಶಿಲಾನ್ಯಾಸ
ಹನೂರು,ಫೆ.3: ಕಳೆದ ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಂದಿದ್ದು, ಸಾಕಷ್ಟು ಅಭಿವೃದ್ದಿಯಾಗಿದೆ ಎಂದು ಶಾಸಕ ನರೇಂದ್ರರಾಜುಗೌಡ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಗ್ರಾಮಗಳಲ್ಲಿ ಶುಚಿತ್ವ ಕಾಪಾಡಬೇಕೆಂದರೆ ಸಿಸಿ ರಸ್ತೆ ಮತ್ತು ಚರಂಡಿಗಳು ಅವಕಶ್ಯತೆ ಇರುವುದನ್ನು ಮನಗಂಡು ಕಳೆದ ಸಿದ್ದರಾಮಯ್ಯರವರ ಸರ್ಕಾರದ ಅವಧಿಯಲ್ಲಿ ವಿಶೇಷವಾಗಿ ವಿವಿಧ ಯೋಜನೆಗಳ ಮುಖಾಂತರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಂದಿದ್ದು, ಇದರಿಂದ ಕ್ಷೇತ್ರದ ಉದ್ದಗಲಕ್ಕೂ ಸಾಕಷ್ಟು ಅಭಿವೃದ್ದಿಯಾಗಿದೆ. ಬಹುಪಾಲು ಎಲ್ಲಾ ಗ್ರಾಮಗಳ ಬಡಾವಣೆಗಳ ರಸ್ತೆಗಳು ಕಾಂಕ್ರಿಟ್ ರಸ್ತೆ ಮತ್ತು ಚರಂಡಿಗಳು ನಿರ್ಮಾಣವಾಗಿರುವುದರ ಜೊತೆಗೆ ಎಲ್ಲಾ ಹಾಡಿಗಳು ಸಹ ಅಭಿವೃದ್ದಿ ಪಥದತ್ತ ಸಾಗಿದೆ ಎಂದರು.
ಚಾಲನೆ: ತಾಲೂಕಿನ ಬಂಡಳ್ಳಿ, ಸುಂಟರದೊಡ್ಡಿ, ನೆಯ್ಕಾರನದೊಡ್ಡಿ, ಅಣ್ಣಗಳ್ಳಿದೊಡ್ಡಿ ಗ್ರಾಮಗಳಲ್ಲಿ ಬಡಾವಣೆಗಳಲ್ಲಿ ಸುಮಾರು 60 ಲಕ್ಷ ವೆಚ್ಚದಲ್ಲಿ ಟಿಎಸ್‍ಪಿ ಎಸ್‍ಸಿಪಿ ಯೋಜನೆ ಮುಖಾಂತರ ಹಾಗೂ ಮರಿಮಂಗಲ ಗ್ರಾಮದ ಬಡವಾಣೆಯಲ್ಲಿ ಅಲ್ಪಸಂಖ್ಯಾತ ಯೋಜನೆಯ 15 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ: ಹನೂರು ಪಟ್ಟಣದ ಕೆಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ ನಿಲ್ದಾಣದ ಕಾಂಕ್ರಿಟ್ ರಸ್ತೆಗೆ ಭೂಮಿ ಪೂಜೆ ನೇರವೇರಿಸಿದರು. ನಂತರ ಮಾತನಾಡಿದ ಅವರು, ಹನೂರು ಪಟ್ಟಣದಲ್ಲಿ ಬಸ್ ಡಿಪೋವನ್ನು ತೆರೆಯಲು ಸಾರಿಗೆ ಸಚಿವರು ಉತ್ಸುಕರಾಗಿದ್ದು ಈಗಾಗಲೇ ಪಟ್ಟಣದ ಹೊರ ವಲಯದಲ್ಲಿ ಡಿಪೋಗಾಗಿ ನಿವೇಶನ ಗುರುತಿಸಿ ಕಾಯ್ದಿರಿಸಲಾಗಿದೆ. ಶೀಘ್ರದಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಶಿವಮ್ಮಕೃಷ್ಣ, ಸದಸ್ಯ ಬಸವರಾಜು, ಲೇಖಾರವಿಕುಮಾರ್, ಚಾಮುಲ್ ಅಧ್ಯಕ್ಷ ಸಿ ಎನ್ ಗುರುಮಲ್ಲಪ್ಪ, ಪಪಂ ಅಧ್ಯಕ್ಷ ಮಮತಾ, ಶಾಗ್ಯ ಗ್ರಾಪಂ ಅಧ್ಯಕ್ಷ ಜಾನ್‍ಪೌಲ್, ರೋಟರಿ ಅಧ್ಯಕ್ಷ ಸಿ.ಗಿರೀಶ್, ಮುಖಂಡರಾದ ಮಾದೇಶ್, ನಟರಾಜು, ವೆಂಕಟರಮಣನಾಯ್ಡು, ಚಿಕ್ಕತಮಯ್ಯನಾಯ್ಡು, ನಿಂಗೇಗೌಡ, ಸಂಪತ್ ಸೇರಿದಂತೆ ಹಲವರು ಹಾಜರಿದ್ದರು.