ಸಚಿವರಿಂದ ತುಳು ಭಾಷೆಗೆ ಅವಮಾನ: ಆರೋಪ

Update: 2019-02-04 17:41 GMT

ಮೂಡಿಗೆರೆ, ಫೆ.4: ಕರ್ನಾಟಕ ತುಳು ಮತ್ತು ಬ್ಯಾರಿ ಸಾಹಿತ್ಯ ಅಕಾಡಮಿ ಸಹಯೋಗದೊಂದಿಗೆ ಮೂಡಿಗೆರೆ ತುಳುಕೂಟದ ವತಿಯಿಂದ ಫೆ.1 ಮತ್ತು 2ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ 2 ದಿನಗಳ ಜಿಲ್ಲಾಮಟ್ಟದ ತುಳು ಸಮ್ಮೇಳನಕ್ಕೆ ರಾಜ್ಯ ಸಮ್ಮಿಶ್ರ ಸರಕಾರದ ಮೂವರು ಸಚಿವರು ಮತ್ತು ಸಂಸದೆಯನ್ನು ಆಹ್ವಾನಿಸಿದ್ದರೂ ಓರ್ವ ಸಚಿವರೂ ಸಮ್ಮೇಳನಕ್ಕೆ ಹಾಜರಾಗದೆ ತುಳು ಭಾಷೆಗೆ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್ ಆರೋಪಿಸಿದ್ದಾರೆ.

ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ಅವರು, ಸಚಿವರು ಮತ್ತು ಸಂಸದರು ತುಳು ಭಾಷೆಯ ಉಳಿವಿನ ಚರ್ಚೆಗಳಿಂದ ತಪ್ಪಿಸಿಕೊಳ್ಳುತ್ತಿರುವುದು ಈ ಸಚಿವರಿಗೆ ತುಳು ಭಾಷೆಯ ಮೇಲಿನ ಅಭಿಮಾನ ಕಡಿಮೆಯಾದಂತಿದೆ. ಇಂತಹ ಸಚಿವರಿಂದ ತುಳು ಭಾಷೆಯ ಬೆಳವಣಿಗೆ ನಿರೀಕ್ಷಿಸುವುದು ಹೇಗೆ ಎಂದು ಅಬ್ಬಾಸ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News