ಫೆ.10: ಪ್ರಧಾನಿ ಮೋದಿ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

Update: 2019-02-05 11:41 GMT

ಹುಬ್ಬಳ್ಳಿ, ಫೆ. 5: ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕರ್ನಾಟಕಕ್ಕೆ ಬರುವುದಾದರೇ ಕಳಸಾ ಬಂಡೂರ ಇತ್ಯರ್ಥ ಮಾಡಬೇಕು ಅಲ್ಲದೇ ರೈತರ ಸಾಲ ಮನ್ನಾ ಮಾಡಬೇಕು ಇಲ್ಲವಾದರೇ ಪ್ರಧಾನಿಯವರು ಉತ್ತರ ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಒಂದು ವೇಳೆ ಯಾವುದೇ ನಿರ್ಧಾರ ಕೈಗೊಳ್ಳದೇ ಆಗಮಿಸಿದರೇ ಫೆ. 10 ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ಧು ತೇಜಿ ತಿಳಿಸಿದರು.

ನಗರದಲ್ಲಿಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ 4 ಜಿಲ್ಲೆ 9 ತಾಲೂಕುಗಳಲ್ಲಿ ಕಳಸಾ ಬಂಡೂರಿ ಮಹದಾಯಿಗಾಗಿ ಮೂರು ವರ್ಷದಿಂದ ನಿರಂತರ  ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಇತ್ಯರ್ಥಗೊಳಿಸುವ ಕುರಿತು ಯಾವುದೇ  ಧ್ವನಿ ಎತ್ತುತ್ತಿಲ್ಲ ಎಂದರು.

ಸಂಸದ ಜೋಶಿಯವರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಶ್ರಮವಹಿಸಿಲ್ಲ ಇಷ್ಟು ವರ್ಷದ ಮಹದಾಯಿ ಹೋರಾಟದ ಬಗ್ಗೆ ಯಾವುದೇ ದ್ವನಿ ಎತ್ತುತ್ತಿಲ್ಲ ಎಂದು ಅವರು ತಿಳಿಸಿದರು.

ಎರಡು ಹೆಕ್ಟೇರ್ ಜಮೀನಿಗೆ ಆರು ಸಾವಿರ ಹಣ ನೀಡಿರುವುದು ಕೇವಲ ಒಂದು ಎಕರೇ ಜಮೀನ ಕೃಷಿಗೆ ಕೂಡ ಸಾಲುತ್ತಿಲ್ಲ ಇಂತಹ ಮೂಗಿಗೆ ತುಪ್ಪ ಹಚ್ಚುವ ನಿರ್ಧಾರ  ಕೈಗೊಂಡಿರುವುದು ಖಂಡನೀಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News