ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ಸಿ.ಎಂ ರಾಶಿ ಆಯ್ಕೆ
Update: 2019-02-06 19:27 IST
ಮಡಿಕೇರಿ, ಫೆ.6: ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸಿ.ಎಂ.ರಾಶಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 12 ರಿಂದ ಆರಂಭವಾಗುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಶಿ 1500 ಮೀ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೂತಿ ಗ್ರಾಮದ ನಿವಾಸಿ ಸಿ.ಎನ್.ಮಂಜುನಾಥ್ ಪುತ್ರಿಯಾಗಿರುವ ಇವರು ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಉಪನ್ಯಾಸಕ ಚನ್ನಕೇಶವ ಮೂರ್ತಿ ತರಬೇತಿ ನೀಡಿದ್ದಾರೆ.