×
Ad

ಬ್ಯಾರಿ ಕಥೆಗಳ ಆಹ್ವಾನ

Update: 2019-02-07 17:56 IST

ಮಡಿಕೇರಿ, ಫೆ.7: “ಕೊಡಗು ಬ್ಯಾರಿ ಬಾಷೆ ಎಲ್ತ್ ಗಾರೊ ಕೂಟ”ದ ವತಿಯಿಂದ ಬ್ಯಾರಿ ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಇದೇ ಪ್ರಥಮ ಬಾರಿಗೆ ಆಸಕ್ತ ಬರಹಗಾರರಿಂದ ಬ್ಯಾರಿ ಭಾಷೆಯ ಕಥೆಗಳನ್ನು ಆಹ್ವಾನಿಸಲಾಗಿದೆ.

ಕೈ ಬರಹವಾಗಿದ್ದಲ್ಲಿ ಫುಲ್‍ಸ್ಕೇಪ್ ಹಾಳೆಯ ನಾಲ್ಕು ಪುಟ ಮೀರದಂತೆಯೂ ಡಿಟಿಪಿ ಆಗಿದ್ದಲ್ಲಿ ಎರಡು ಪುಟಗಳು ಮೀರದಂತೆ ಹಾಳೆಯ ಒಂದೇ ಮಗ್ಗುಲಲ್ಲಿ ಬರೆದು ತಮ್ಮ ಪೂರ್ಣ ವಿಳಾಸ ಹಾಗೂ ಭಾವಚಿತ್ರದೊಂದಿಗೆ ಕಳುಹಿಸುವಂತೆ ಕೂಟದ ಅದ್ಯಕ್ಷ ಇ.ಸುಲೈಮಾನ್ ಕೋರಿದ್ದಾರೆ. ಕತೆಗಳನ್ನು ಯೂನುಸ್ ಮರ್ಕರಾ ಹೆಚ್., ಹವ್ಯಾಸಿ ಪತ್ರಕರ್ತ, ಬೈತ್‍ ಮನಾರ್ “ವಿಜಯನಗರ ಲೇಔಟ್ ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್ ಹಿಂಭಾಗ ಮಡಿಕೇರಿ ಈ ವಿಳಾಸಕ್ಕೆ ತಾ.25ರ ಒಳಗೆ ಕಳುಹಿಸಿ ಕೊಡುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 9480557123 ಸಂಪರ್ಕಿಸಲು ಕೋರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News