×
Ad

ಲಾರಿ ಹರಿದು ವಿದ್ಯಾರ್ಥಿಗೆ ಗಂಭಿರ ಗಾಯ

Update: 2019-02-08 17:50 IST

ವಿಜಯಪುರ,ಪೆ.8: ಶಾಲಾ ವಿದ್ಯಾರ್ಥಿಯ ಮೇಲೆ ಲಾರಿ ಹರಿದು ಗಂಭೀರ ಗಾಯಗಳಾದ ಘಟನೆ ಸಿಂದಗಿ ನಗರದ ಕೆರೆ ಹತ್ತಿರ ನಡೆದಿದೆ.

ಸಿಂದಗಿಯ ಸರ್ಕಾರಿ ಆದರ್ಶ ವಿದ್ಯಾಲಯದ 8 ನೇ ತರಗತಿ ವಿದ್ಯಾರ್ಥಿ ಸೋಮನಾಥ ಬಸವರಾಜ ಅಂಗಡಿ (14) ಶಾಲೆಯಿಂದ ಮನಗೆ ತೆರಳುವ ಘಟನೆ ನಡೆದಿದ್ದು, ವಿದ್ಯಾರ್ಥಿಯ ಬಲಗಾಲಿಗೆ ತೀವ್ರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಚಾಲಕನನ್ನು ಲಾರಿ ಸಮೇತ ಸಿಂದಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News