ಹನೂರು ಪಟ್ಟಣ ಪಂಚಾಯತ್ ಬಜೆಟ್ ಮಂಡನೆ
ಹನೂರು,ಫೆ.8: ಹನೂರು ಪಟ್ಟಣ ಪಂಚಾಯತ್ ನಲ್ಲಿ ಮಮತ ಅವರ ಅಧ್ಯಕ್ಷತೆಯಲ್ಲಿ 2019-20ನೇ ಸಾಲಿನ ಆಯ್ಯ-ವ್ಯಯ ಮಂಡಿಸಲಾಯಿತು.
ಹನೂರು ಪಟ್ಟಣ ಪಂಚಾಯತ್ ನ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಮಂಡಿಸಿದ ಅಯವ್ಯಯದ ಮೇಲೆ ಸದಸ್ಯರು ಚರ್ಚೆ ನಡೆಸಿ ಒಪ್ಪಿಗೆ ನೀಡಿದರು.
ಪ್ರಮುಖ ಆದಾಯಗಳು: ಆಸ್ತಿ ತೆರಿಗೆ ಮತ್ತು ಡಂಡ 25.50 ಲಕ್ಷ ಮಳಿಗೆಗಳ ಬಾಡಿಗೆ 15 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕಗಳು 3 ಲಕ್ಷ, ಅಭಿವೃದ್ದಿ ಶುಲ್ಕಗಳು 7.50 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕಗಳು 1.75 ಲಕ್ಷ ನೀರಿನ ಶುಲ್ಕ ಮತ್ತು ಠೇವಣಿ 10.75 ಲಕ್ಷ, ಘನತಾಜ್ಯ ನಿರ್ವಹಣಾ ಶುಲ್ಕಗಳು 2.70 ಲಕ್ಷ, ಖಾತೆ ಬದಲಾವಣೆ ಶುಲ್ಕ 2.25 ಲಕ್ಷ, ಶೌಚಾಲಯದ ಬಾಡಿಗೆ 1 ಲಕ್ಷ, ಅನುಪಯುಕ್ತ ಮತ್ತು ದಸ್ತಾನು ಮಾರಾಟ 1ಲಕ್ಷ, ಬಸ್‍ನಿಲ್ದಾಣ ಶುಲ್ಕಗಳು 1.25 ಲಕ್ಷ, ಬ್ಯಾಂಕ್ ಖಾತೆಯಿಂದ ಬಂದ ಬಡ್ಡಿ 11.05 ಲಕ್ಷ, ಇತರೆ ಶುಲ್ಕಗಳು ರೂ 4.31 ಲಕ್ಷ, ಶಾಸಕರ ಅನುದಾನ 2.50 ಲಕ್ಷ ಸೇರಿದಂತೆ ಪ್ರಸ್ತುತ ಸಾಲಿನಲ್ಲಿ ಒಟ್ಟು ಆದಾಯ 14,42,95,000 ನಿರೀಕ್ಷಿಸಲಾಗಿದೆ.
ವೆಚ್ಚಗಳು: ಕಚೇರಿ ಕಟ್ಟಡಗಳ ನಿರ್ಮಾಣ 52 ಲಕ್ಷ, ಸ್ವಾಗತ ಕಾಮಾನು, ಕಂಪೌಂಟ್ 15ಲಕ್ಷ, ರಸ್ತೆ ಪದಾಚಾರಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ 2.70 ಕೋಟಿ, ಸೇತುವೆಗಳ ಕಾಮಗಾರಿ 1 ಕೋಟಿ, ಬೀದಿ ದೀಪ ನಿರ್ವಹಣೆ 80ಲಕ್ಷ, ಘನ ತ್ಯಾಜ್ಯ ಘಟಕ ಅಭಿವೃದ್ದಿಗಾಗಿ 52ಲಕ್ಷ, ಕಸಾಯಿ ಖಾನೆ ನಿರ್ಮಾಣ 25ಲಕ್ಷ ಹಾಗೂ ಇತರೆ ಸೇರಿದಂತೆ ಒಟ್ಟು 17,25,61,300 ವೆಚ್ಚಗಳಾಗಿ ಅಂದಾಜು ಪಟ್ಟಿ ತಯಾರಿಸಲಾಗಿದೆ. 19,27,242 ರೂ. ಗಳ ಉಳಿತಾಯ ನಿರೀಕ್ಷಿಸಲಾಗಿದೆ.
ವಿವಿಧ ಮೂಲಗಳಿಂದ ವಸೂಲಾತಿ: ಆಸ್ತಿ ತೆರಿಗೆ ವಸೂಲಾತಿ 17ಲಕ್ಷ, ಮಳಿಗೆಗಳ ಬಾಡಿಗೆ ವಸೂಲಾತಿ 2.62ಲಕ್ಷ, ಕಟ್ಟಡ ಪರವಾನಿಗೆ 2ಲಕ್ಷ, ಅಭಿವೃದ್ದಿ ತೆರಿಗೆ ವಸೂಲಾತಿ 4 ಲಕ್ಷ, ಉದ್ದಿಮೆ ಪರವಾನಿಗೆ 1ಲಕ್ಷ, ನೀರಿನ ತೆರಿಗೆ ಶುಲ್ಕ 2.92ಲಕ್ಷ, ಖಾತಾ ಬದಲಾವಣೆ 1.55ಲಕ್ಷ, ಶೌಚಾಲಯ ಬಾಡಿಗೆ 5ಲಕ್ಷ, ಬಸ್ ನಿಲ್ದಾಣದಲ್ಲಿ ವಸೂಲಾತಿ 27000 ಒಟ್ಟು 36,36,000 ರೂಗಳು ವಸೂಲಾತಿಯಾಗಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ರಮೇಶ್ ನಾಯ್ಡು, ಬಾಲರಾಜ್ ನಾಯ್ಡು, ಬಸವರಾಜ್, ಸುಮತಿ, ಮಹಾದೇವಮ್ಮ, ಮುಖ್ಯಾಧಿಕಾರಿ ಮೋಹನ್ ಕೃಷ್ಣ, ಸಂಘಟನಾ ಅಧಿಕಾರಿ ಭೈರಪ್ಪ, ರಮೇಶ್, ರಾಘವೇಂದ್ರ ಮನಿಯಾ ಹಾಗೂ ಸಿಬ್ಬಂದಿಗಳಿದ್ದರು.