ಕಲ್ಯಾಣ ಮಂಟಪದಲ್ಲಿ ಕಳವು ಪ್ರಕರಣ: ಆರೋಪಿ ಬಂಧನ- 3.25 ಲಕ್ಷ ಮೌಲ್ಯದ ಚಿನ್ನಾಭರಣ ವಶ

Update: 2019-02-08 13:07 GMT

ಹಾಸನ,ಫೆ.8: ನಗರದ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ನಡೆಯುವಾಗ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದವನನ್ನು ಬಂಧಿಸುವಲ್ಲಿ ನಗರ ವೃತ್ತ ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ 3.25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ನಂದಿನಿ ತಿಳಿಸಿದರು.

ನಗರದ ಬಡಾವಣೆ ಪೊಲೀಸ್ ಠಾಣೆ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ನಗರದಲ್ಲಿ ಇತ್ತೀಚೆಗೆ ಕಲ್ಯಾಣ ಮಂಟಪದ ರೂಮಿನ ಒಳ ಪ್ರವೇಶಿಸಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಮಹಿಳೆಯರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್ ಗೌಡ ಮತ್ತು ಅಪರ ಪೊಲೀಸ್ ಅಧೀಕ್ಷರಾದ ಬಿ.ಎನ್.ನಂದಿನಿ ರವರ ಮಾರ್ಗದರ್ಶನದಲ್ಲಿ ಹಾಸನ ಉಪ ವಿಭಾಗದ ಡಿವೈಎಸ್‍ಪಿ ವಿ.ಆರ್. ಪುಟ್ಟಸ್ವಾಮಿಗೌಡ ರವರ ನೇತೃತ್ವದಲ್ಲಿ  ಸಿಪಿಐ ವೈ.ಸತ್ಯನಾರಾಯಣ, ಹಾಸನ ನಗರ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಪಿ.ಸುರೇಶ್ ಮತ್ತು ಸಿಬ್ಬಂದಿಗಳಾದ ಹೆಚ್.ಸಿ-313, ಸೋಮಶ್, ಪಿ.ಸಿ- 72, ಪ್ರವೀಣ, ಪಿ.ಸಿ-410 ರವಿಕುಮಾರ ರವರನ್ನೊಳಗಂಡ ತಂಡವನ್ನು ರಚಿಸಿ ಆರೋಪಿಯನ್ನು ಬಂಧಿಸಲಾಯಿತು.

ಬಂಧಿತನಿಂದ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಕಳವು ಮಾಡಿದ ಸುಮಾರು 3.25 ಲಕ್ಷ ಮೌಲ್ಯದ ನೂರು ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಪೊಲೀಸ್ ಅಧೀಕ್ಷಕ ಶ್ರೀ ಡಾ.ಎ.ಎನ್.ಪ್ರಕಾಶ್‍ ಗೌಡ ಶ್ಲಾಘಿಸಿದ್ದಾರೆ ಎಂದು ವಿವರ ನೀಡಿದರು. 

ಈ ಸಂಧರ್ಭದಲ್ಲಿ ಡಿವೈಎಸ್‍ಪಿ ವಿ.ಆರ್.ಪುಟ್ಟಸ್ವಾಮಿಗೌಡ, ಸಿಪಿಐ ವೈ.ಸತ್ಯನಾರಾಯಣ, ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಪಿ.ಸುರೇಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News