ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟು ಬಜೆಟ್ ಮಂಡನೆ: ಶಾಸಕ ಸಿಟಿ ರವಿ

Update: 2019-02-08 18:10 GMT

ಚಿಕ್ಕಮಗಳೂರು, ಫೆ.8: ಕಡೂರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರುವುದರಿಂದ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೆಬ್ಬೆ ಹಳ್ಳದಿಂದ ಕಡೂರು ಭಾಗದ 19 ಕೆರೆಗಳಿಗೆ ನೀರು ಹಾಯಿಸುವ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‍ಗೆ ಪ್ರತಿಕ್ರಿಯಿಸಿರುವ ಅವರು, ಈ ಯೋಜನೆಗೆ ಪರಿಸರ ಇಲಾಖೆ ಅನುಮತಿ ಬೇಕು. ಅದು ಸಿಗುವುದು ಕಷ್ಟ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 400 ಕೋಟಿ ಅನುದಾನ ಕೇಳಿದ್ದೆವು. ಕೇವಲ 50 ಕೋಟಿ ಮೀಸಲಿಡಲಾಗಿದೆ. ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಅಸಾಧ್ಯ ಎಂದರು. 

ಕಳಸವನ್ನು ತಾಲೂಕು ಕೇಂದ್ರ ಮಾಡಿರುವುದು ಸ್ವಾಗರ್ತಾಹ. ಕೇಂದ್ರ ಸರ್ಕಾರದ ಮಾತೃವಂದನ ಕಾರ್ಯಕ್ರಮವನ್ನೆ ಮಾತೃಶ್ರೀ ಯೋಜನೆ ಎಂದು ಸರ್ಕಾರ ಮಾಡಿದೆ. ಬರಪರಿಸ್ಥಿತಿಗೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ದೂರದೃಷ್ಠಿ ಇಲ್ಲ.
-ಸಿ.ಟಿ. ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News