×
Ad

ತುಂಗಾ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Update: 2019-02-08 23:45 IST

ಶೃಂಗೇರಿ, ಫೆ,8: ಸ್ನಾನಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಇರುವ ಅಭಿರುಚಿ ಹೊಟೆಲ್‍ನಲ್ಲಿ ಸರ್ವರ್ ಆಗಿ ಕರ್ತವ್ಯದಲ್ಲಿದ್ದ ಸಂಜೀವ ಪೂಜಾರಿ (65) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಮೃತರು ಕೊಪ್ಪ ತಾಲೂಕಿನ ಹಿರೇಗದ್ದೆ ಗ್ರಾಮದ ಅಡಿಗೆಬೈಲಿನವರಗಿದ್ದು, ಅವಿವಾಹಿತರಾಗಿದ್ದರು. ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News