ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು ನಕಲಿ ಆಡಿಯೊ: ಶಾಸಕ ಬಿ.ಶ್ರೀರಾಮುಲು

Update: 2019-02-09 18:26 GMT

ದಾವಣಗೆರೆ,ಫೆ.9: ಬಿ.ಎಸ್.ಯಡಿಯೂರಪ್ಪ ಹೆಸರಿಗೆ ಚ್ಯುತಿ ತರಲು ಸಿಎಂ ಕುಮಾರಸ್ವಾಮಿಯವರು ಇಂತಹ ಆಡಿಯೋ ಮೇಕಿಂಗ್ ಮಾಡಿಸಿದ್ದು, ಇದೊಂದು ನಕಲಿ ಆಡಿಯೊ ಅಷ್ಟೇ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಹೇಳಿದರು.

ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಫೇಕ್ ಆಡಿಯೋ ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯ ಬಳಿಯೂ ಇದ್ದರೆ ಆಡಿಯೋ ಬಿಡುಗಡೆ ಮಾಡಲು ಸ್ವತಂತ್ರರು ಎಂದು ವ್ಯಂಗ್ಯವಾಡಿದ ಅವರು, ಕುಮಾರಸ್ವಾಮಿ ಚಿತ್ರರಂಗದಲ್ಲಿ ಒಳ್ಳೆಯ ನಿರ್ಮಾಪಕ, ನಿರ್ದೇಶಕರಾಗಿದ್ದಾರೆ. ಲಂಡನ್‍ನಲ್ಲಿ ಮಗನ ಸಿನಿಮಾ ಮಾಡುವಾಗಲೇ ಇಂತಹ ಫೇಕ್ ಆಡಿಯೋ ಕುಮಾರಸ್ವಾಮಿ ಮಾಡಿಸಿದ್ದಾರೆ ಎಂದು ಟೀಕಿಸಿದರು. 

ಬಜೆಟ್ ಪುಸ್ತಕ ನೀಡದೇ ನಮ್ಮನ್ನು ಹೊರಗೆ ಕಳಿಸುವ ಹುನ್ನಾರವನ್ನು ಮೈತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದರು. ಬಜೆಟ್‍ನಲ್ಲಿ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಯಾವುದೇ ಪ್ರಯೋಜನವೂ ಆಗಿಲ್ಲ. ಕುಮಾರಸ್ವಾಮಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿರುವುದೂ ಸ್ಪಷ್ಟ ಎಂದು ದೂರಿದ ಅವರು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ. ಒಂದು ವೇಳೆ ಬಹುಮತವಿಲ್ಲದೇ ಮೈತ್ರಿ ಸರ್ಕಾರ ಬಿದ್ದರೆ, ಬಿಜೆಪಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡುತ್ತೇವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News