ವೇಶ್ಯಾವಾಟಿಕೆ ದಂಧೆ: ಇಬ್ಬರ ಬಂಧನ, ಮೂವರು ಯುವತಿಯರ ರಕ್ಷಣೆ
ಬೆಂಗಳೂರು, ಫೆ.10: ಹೊರರಾಜ್ಯದಿಂದ ಯುವತಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರಿನ ಸುದೀರ್(32) ಹಾಗೂ ಕುಪ್ಪ ತಾಲೂಕಿನ ಉಳುವೆ ಗ್ರಾಮದ ಸೂಚನ್‌ಗೌಡ(29) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಬಾಗಲೂರು ಮುಖ್ಯರಸ್ತೆಯ ಕಟ್ಟಿಗೇನಹಳ್ಳಿ ಗೇಟ್ ಬಳಿಯ ರಾಮಣ್ಣ ಗಾರ್ಡನ್‌ನ ಪ್ರಿನ್ಸ್ ಇನ್ ಲಾಡ್ಜ್‌ನಲ್ಲಿ ಹೊರ ರಾಜ್ಯದಿಂದ ಹುಡುಗಿಯರನ್ನಿಟ್ಟು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆಂಬ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಹೊರ ರಾಜ್ಯದ ಮೂವರು ಯುವತಿಯರನ್ನು ವೇಶ್ಯಾವಾಟಿಕೆಯಿಂದ ಸಂರಕ್ಷಣೆ ಮಾಡಲಾಗಿದ್ದು, ಬಂಧಿತರಿಂದ 3 ಮೊಬೈಲ್ 7 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.